ಚುನಾವಣಾ ಆಯೋಗದ ಗಮನ ಸೆಳೆದ ದಾವಣಗೆರೆ ಸ್ವೀಪ್ ತಂಡ
ದಾವಣಗೆರೆ: ಕರ್ನಾಟಕ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ದಾವಣಗೆರೆ ಸ್ವೀಫ್ ಸಮಿತಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳು ಚುನಾವಣಾ ಆಯೋಗದ ಗಮನ ಸೆಳೆದಿದೆ.
ಇತ್ತೀಚೆಗೆ ದಾವಣಗೆರೆ ಹೈಸ್ಕೂಲ್ ಫೀಲ್ಡ್ ನಲ್ಲಿ ಆಯೋಜಿಸಿದ್ದ ಸ್ವೀಪ್ ಕಾರ್ಯಕ್ರಮದ ವಿಡಿಯೋ ಇದೀಗ ಚುನಾವಣಾ ಆಯೋಗ ನಿರ್ಮಿಸಿರುವ ಡಾಕುಮೆಂಟರಿಯಲ್ಲಿ ಸೇರಿದೆ.
ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯತಿ ಸಿಇಒ ಸುರೇಶ್ ನೇತೃತ್ವದ ತಂಡ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಜಿಲ್ಲಾ ಚುನಾವಣಾ ಅಧಿಕಾರಿ ಶಿವಾನಂದ ಕಾಪಶಿ ತಂಡಕ್ಕೆ ಶುಭ ಹಾರೈಸಿದ್ದಾರೆ.
Glimpses of #SVEEP activities in #Karnataka. Don't forget to cast your vote in forthcoming #Karnataka Elections2023 on May 10, 2023 #NoVoterToBeLeftBehind#KarnatakaElections2023 #GoVote #EveryVoteMatters pic.twitter.com/kNwmBGMaqw
— Election Commission of India (@ECISVEEP) April 12, 2023