ದಾವಣಗೆರೆ! ಎಸ್‌ಎಂಎಲ್ ಬಸ್ ಸ್ಟೇರಿಂಗ್ ರಾಡ್ ಕಟ್! ಭಾರೀ ಅನಾಹುತದಿಂದ ಬಚಾವಾದ ಪ್ರಯಾಣಿಕರು..

ದಾವಣಗೆರೆ: ಸ್ಟೇರಿಂಗ್ ರಾಡ್ ಕಟ್ಟಾಗಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆ ಬಸ್ ಹತ್ತಿ, ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊ0ಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಚನ್ನಗಿರಿ ಕಡೆಯಿಂದ ಬರುತ್ತಿದ್ದ ಎಸ್‌ಎಂಎಲ್ (ಕೆ.ಎ.25 ಸಿ-4443 ಸಂಖ್ಯೆಯ) ಬಸ್ಸಿನ ಸ್ಟೇರಿಂಗ್ ರಾಡ್ ಕಟ್ಟಾಗಿ ದಾವಣಗೆರೆ ನಗರದ ವಿಮಾನಮಟ್ಟಿಯ ಬಳಿ ಇರುವ ಎಂಆರ್‌ಪಿ ಬಾರ್ ಮುಂಭಾಗದ ರಸ್ತೆ ಮಧ್ಯೆಯ ಡಿವೈಡರ್ ಮೇಲೆ ಹರಿದಿದೆ.
ಬಸ್ ನಿಧಾನಗತಿಯಲ್ಲಿ ಇದ್ದದ್ದರಿಂದ ಹಾಗೂ ಡಿವೈಡರ್ ಕಡೆ ಚಲಿಸಿದ ಪ್ರಯುಕ್ತ ಡಿವೈಡರ್ ನಿಂದ ಬಸ್ ಅಲ್ಲೆ ನಿಂತಿದೆ. ಇದರಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಒಂದುವೇಳೆ ಡಿವೈಡರ್ ಇರದೆ ಇದ್ದಿದ್ದರೆ ಅಥವಾ ಬಲಗಡೆ ಚಲಿಸುವ ಬದಲು ಎಡಭಾಗಕ್ಕೆ ಚಲಿಸಿದ್ದೆ ಆದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದ್ದು, ಭಾರೀ ಅನಾಹುತದಿಂದ ಪ್ರಯಾಣಿಕರು, ಮುಂದೆಯಿ0ದ ಬರುತ್ತಿದ್ದ ವಾಹನಸವಾರರು ಬಜಾವ್ ಆಗಿದ್ದಾರೆ.
garudavoice21@gmail.com 9740365719