ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಶೆಟ್ಟರ್ ಸ್ವಾಗತಿಸಿದ ದಾವಣಗೆರೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಸಿಗದಿದ್ದರಿಂದ ಬಂಡಾಯ ಎದ್ದಿರುವ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಯೂತ್ ಕಾಂಗ್ರೆಸ್‌ನ ಶಂಭು ಉರೇಕೊಂಡಿ ಹಾಗೂ ರತನ್ ಹಾರ ಹಾಕಿ ಸ್ವಾಗತಿಸಿದರು.
ದಾವಣಗೆರೆ ಬೀಗರು ಕಳಿಸಿಕೊಟ್ಟಿದ್ದ ಹೆಲಿಕಾಪ್ಟರ್ ನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳಿದ್ದು ವಿಶೇಷವಾಗಿತ್ತು.. ಈ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್ ಕೂಡ ಹೇಳಿದ್ದರು. ಕಾಂಗ್ರೆಸ್ ಸೇರುವ ಬಗ್ಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮನೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದ್ದು, ಅಂತಿಮವಾಗಿ ಶೆಟ್ಟರ್ ಯಾವ ತಿರ್ಮನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ