DC Video: ನಾನು ಬಹಳ ಆರಾಮ್ ಇದೀನಿ, ಮಸ್ತ್ ಅದೀನಿ, ಹೃದಯಾಘಾತವಾಗಿದೆ ಎಂದು ಕಿಡಿಗೇಡಿ ಹಬ್ಬಿಸಿದ್ದಾನೆ.! ಮಹಾಂತೇಶ್ ಭೀಳಗಿ ವಿಡಿಯೋ ಸ್ಪಷ್ಟನೆ
ದಾವಣಗೆರೆ: ನಾನು ಬಹಳ ಆರಾಮ್ ಇದೀನಿ, ಮಸ್ತ್ ಅದೀನಿ.. ರೋಬೋಟ್ ತರಹ ಕೆಲಸ ಮಾಡ್ತಿದೀನಿ.. ಸುಳ್ಳು ಅಪಪ್ರಚಾರವನ್ನ ಯಾರೂ ನಂಬಬೇಡಿ…!
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಹೃದಯಾಘಾತವಾಗಿದೆ ಎಂದು ಯಾರೋ ಕಿಡಿಗೇಡಿಗಳು ಹಬ್ಬಿಸಿದ್ದ ಸುಳ್ಳುಸುದ್ದಿಗೆ ಸ್ವತಃ ಜಿಲ್ಲಾಧಿಕಾರಿ ವೀಡಿಯೋ ಮೂಲಕ ತಾವು ಆರೋಗ್ಯವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ನಾನು ಕಳೆದ ಎರಡು ವರ್ಷಗಳಿಂದ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಈಗಲೂ ಆರೋಗ್ಯವಾಗಿದ್ದೇನೆ. ಆದರೆ, ಯಾರೋ ಕಿಡಿಗೇಡಿಗಳು ತಮಗೆ ಹೃದಯಘಾತವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು, ಇದು ಸತ್ಯಕ್ಕೆ ದೂರ ಎಂದವರು ಹೇಳಿದ್ದಾರೆ.