ಜಿಲ್ಲಾಧಿಕಾರಿ ಬೀಳಗಿ ಹೆಸರಲ್ಲಿ ನಕಲಿ ಫೆಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆನ್ ಲೈನ್ ವಂಚಕರು!
ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೆಸರಲ್ಲಿ ಆನ್ ಲೈನ್ ವಂಚಕರು ಫೇಸ್ ಬುಕ್ ನಕಲಿ ಖಾತೆ ತೆರೆದಿದ್ದಾರೆ.
ಡಿಸಿ ಮಹಾಂತೇಶ್ ಬೀಳಗಿ ಅವರ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದಿರುವ ವಂಚಕರು ಸ್ನೇಹಕ್ಕೆ ಮನವಿ ಕಳಿಸಿ, ಸ್ನೇಹಿತರಾದವರಿಗೆ ತುರ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಕುಟುಂಬದೊಂದಿಗೆ ಇರುವ ಫೋಟೊವನ್ನು ವಂಚಕರು ನಕಲಿಖಾತೆಗೆ ಹಾಕಿದ್ದು, ಜನರನ್ನು ನೈಜವೆಂಬಂತೆ ನಂಬಿಸಲು ಯತ್ನಿಸಿದ್ದಾರೆ. ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಬೀಳಗಿ ಅವರು ತಮ್ಮ ಹೆಸರಲ್ಲಿ ನಕಲಿ ತೆರೆದಿದಿರುವುದು ಕಂಡುಬಂದಿದ್ದು, ಯಾರೂ ಪ್ರತಿಕ್ರಿಯೆ ನೀಡದಂತೆ ಕೋರಿದ್ದಾರೆ.