ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಮುಂದಿನ ವರ್ಷ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸಚಿವ ಸಂಪುಟ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ ನಿಮ್ಮ ಸ್ತ್ರಿ ಶಕ್ತಿ ಸಾಲದ ಮನ್ನಾ ಮಾಡ್ತೀನಿ ಎಂದುರಾಜ್ಯದ ಸ್ತ್ರೀ ಸಂಘದ ಮಹಿಳೆಯರಿಗೆ ಸಿದ್ದರಾಮಯ್ಯ ಅವರು ಭರವಸೆಯನ್ನು ನೀಡಿದ್ದಾರೆ.
ಸ್ತ್ರೀ ಸಂಘದ ಮಹಿಳೆಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಾಲಮನ್ನಾ ಬಗ್ಗೆ ಮನವಿ ಸಲ್ಇಸಿದ್ದರು. ನಾನು ಭರವಸೆ ಕೊಟ್ಟಿರೋದು ನಿಜ. ಆದರೆ, ಮುಂದಿನ ವರ್ಷ ಇದರ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಭರವಸೆ ನೀಡಿ ಕಳುಹಿಸಿದರು. ರಾಜ್ಯಾದ್ಯಂತ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾಗೆ 2,400 ಕೋಟಿ ಬೇಕಾಗುತ್ತದೆ. ಹೀಗಾಗಿ ಈ ವರ್ಷ ಆಗೋದಿಲ್ಲ ಮುಂದಿನ ವರ್ಷ ಮಾಡುವುದಾಗಿ ಎಂದು ಸಿದ್ದರಾಮಯ್ಯ ಮಹಿಳೆಯರುಗೆ ಭರಸವೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಯರು ಇಂದು ಅಥಾವ ನಾಳೆ ಸಂಘದ ಮಹಿಳೆಯರ ಜೊತೆ ಚರ್ಚೆ ಮಾಡಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.