ಮುಸಲ್ಮಾನರನ್ನು ಸಿಎಂ ಎಂದು ಘೋಷಿಸಿ; ಹೆಚ್ಡಿಕೆಗೆ ಸಚಿವ ಡಾ.ಸುಧಾಕರ್ ಸವಾಲು
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರು, ಮುಸಲ್ಮಾನರನ್ನು ಸಿಎಂ ಎಂದು ಘೋಷಿಸಲಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸವಾಲು ಹಾಲಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯೆ ನೀಡಬೇಕಿಲ್ಲ. ಆದರೆ ಅವರಿಗೆ ತಾಕತ್ತಿದ್ದರೆ ಮುಸಲ್ಮಾನರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಸವಾಲೆಸೆದರು.
ಕುಮಾರಸ್ವಾಮಿ ಅವರ ಮಾತು ಅಗತ್ಯವೇ ಇರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉತ್ತಮ ಆಡಳಿತಗಾರರು. ಬಿಜೆಪಿಯು ಕುಮಾರಸ್ವಾಮಿಯ ಸಲಹೆ ಕೇಳುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೆಡಿಎಸ್ನಿಂದ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಅವರು ಬಿಜೆಪಿಗೆ ಸವಾಲು ಹಾಕುವ ಮುನ್ನ, ಅವರಿಗೆ ಅವರೇ ಸವಾಲು ಹಾಕಿಕೊಳ್ಳಲಿ ಎಂದರು.