ಸಿದ್ದರಾಮಯ್ಯನವರಿಗೆ ಬೆಳ್ಳಿ ಗದೆ ಸಮರ್ಪಣೆ
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದಾವಣಗೆರೆ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಭೇಟಿ ಮಾಡಿ, ಸಿದ್ದರಾಮಯ್ಯನವರ ಅಮೃತ ಮಹೋತ್ಸವದಂದು ಕೊಡಬೇಕಾಗಿದ್ದ ಬೆಳ್ಳಿ ಗದೆಯನ್ನು ನೀಡಿ, ಸನ್ಮಾನಿಸಿ ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾಗಿ ಮತ್ತೊಮ್ಮೆ ಆಯ್ಕೆಯಾಗಲಿ ಎಂದು ಶುಭಕೋರಿ ಹೊಸ ವರ್ಷದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಚ್ ಬಿ ಗೋಣೆಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಹಾಲೇಕಲ್ ಎಸ್ ಟಿ ಅರವಿಂದ್, ಕಾಂಗ್ರೆಸ್ ಮುಖಂಡ ಇಟ್ಟಿಗುಡಿ ಮಂಜುನಾಥ್, ಮಜ್ಜಿಗೆರೆ ಬಸವರಾಜಪ್ಪ,ಹರಿಹರ ನಂದಿಗಾವಿ ಶ್ರೀನಿವಾಸ್, ರಿಯಲ್ ಎಸ್ಟೇಟ್ ಉದ್ಯಮಿ ಎಸ್‌ಟಿ ರಾಜೇಶ್, ಜಿಲ್ಲಾ ಕುರುಬರ ವಿದ್ಯಾವರ್ಧಕದ ನಿರ್ದೇಶಕ ಬಿ ಲಿಂಗರಾಜ್, ಕೊಗ್ಗನೂರು ಮಂಜುನಾಥ್, ಕುಂದುವಾಡ ಗುಡದಪ್ಪ, ಆನಂದ್ ಕುಮಾರ್ ಶಿವಮೊಗ್ಗ, ಪಲ್ಲೆವ್ ಮಂಜಣ್ಣ, ಕವಿರಾಜ್, ಆರ್ ಬೀರೇಶ್, ಬಸವರಾಜ ಎಂ, ಅಜಯ್ ಮಾಕನೂರು, ವಿಜಯ್ ಹರಿಹರ, ಇನ್ನು ಅನೇಕ ಮುಖಂಡರುಗಳು ಭಾಗವಹಿಸಿದ್ದರು.