ಸುದೀಪ್ ಬರುತ್ತಾರೆಂದು ಸುಳ್ಳು ಹೇಳಿದ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಆಗ್ರಹ

ಸುದೀಪ್ ಬರುತ್ತಾರೆಂದು ಸುಳ್ಳು ಹೇಳಿದ ಸ್ವಾಮೀಜಿ
ದಾವಣಗೆರೆ : ಹರಿಹರದ ರಾಜನಹಳ್ಳಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಚಿತ್ರನಟ ಸುದೀಪ್ ಆಗಮಿಸುತ್ತಾರೆಂದು ಸುಳ್ಳು ಹೇಳಿ, ಅಭಿಮಾನಿಗಳ ಗಲಾಟೆಗೆ ಹಾಗೂ ಪೊಲೀಸರು ಲಾಠಿ ಚಾರ್ಚ್ ಮಾಡಲು ಪ್ರಸನ್ನಾನಂದ ಸ್ವಾಮೀಜಿ ಅವರೇ ಕಾರಣ ಎಂದು ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಇದೇ ಫೆ.16ರಂದು ಬೆಳಿಗ್ಗೆ 12 ಗಂಟೆಗೆ ದಾವಣಗೆರೆ ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳು, ರಾಜ್ಪಾಲರು, ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.