ದೇಶದ ಭವಿಷ್ಯ ನಿರ್ಮಾಣದಲ್ಲಿ ಅಮಿತ್ ಷಾ ಪ್ರಮುಖ ಪಾತ್ರ – ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಂಸೆ

IMG-20210902-WA0002

 

ದಾವಣಗೆರೆ: ಅಮಿತ್ ಶಾ ಗೃಹ ಸಚಿವರಾದ ನಂತರ ಜಮ್ಮು ಕಾಶ್ಮೀರ್ ಭಾರತಕ್ಕೆ ಸೇರಿಸಿ ಹೊಸ ಇತಿಹಾಸ ಬರೆದಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ತೆಗೆದು ಹಾಕಿದ್ದು, ದೇಶದ ಭವಿಷ್ಯ ನಿರ್ಮಾಣದಲ್ಲಿ ಷಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಂಸಿಸಿದ್ದಾರೆ.

ಜಿಎಂಐಟಿಯಲ್ಲಿ ಆಯೋಜಿಸಲಾಗಿದ್ದ ಗಾಂಧಿಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿಯ ಕೇಂದ್ರ ಗ್ರಂಥಾಲಯವನ್ನು ವರ್ಚುಯಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ದಾರ್ ವಲ್ಲಬಭಾಯ್ ಪಟೇಲ್ ಅವರಂತೆ ಅಮಿತ್ ಶಾ ಅವರು ದೇಶದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು, ಭವಿಷ್ಯದ ಇತಿಹಾಸದಲ್ಲಿ ಅವರ ಹೆಸರು ಚಿತಸ್ಥಾಯಿಗಿರುತ್ತದೆ ಎಂದರು.

ರಾಷ್ಟ್ರದ ಎನ್‍ಐಎ ಜತೆ ನಮ್ಮ ರಾಜ್ಯವೂ ಕೈಜೋಡಿಸಿ, ಹಲವು ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆ. ಅಮಿತ್ ಷಾ ಅವರ ಸಲಹೆಯಂತೆ ಅಪರಾಧ ನಿಯಂತ್ರಣಕ್ಕೆ ಮೊಬೈಲ್ ಎಫ್‍ಎಸ್‍ಎಲ್ ಲ್ಯಾಬ್ ಸಿದ್ಧಪಡಿಸಿದ್ದೇವೆ. ತಜ್ಞ ತನಿಖಾ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತಕ್ಷಣ ತಲುಪುವ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದಲೇ ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ತ್ಯಾಗ ಬಹುದೊಡ್ಡದು. ಎಂದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಎಂ ಕೃತಜ್ಞತೆ ಸಲ್ಲಿಸಿದರು.

ಮಿಲಿಟಿರ ಶಾಲೆಗಳ ಮಾದರಿಯಲ್ಲಿ ಪೆÇಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆಯಾಗಿದ್ದು, ಈ ಶಾಲೆಯಲ್ಲಿ ಉತ್ತಮ ಶಿಕ್ಷಣದ ಜತೆ ಮಿಲಿಟಿರ ಮಾದರಿ ಶಿಸ್ತಿನ ಶಿಕ್ಷಣವೂ ದೊರೆಯಲಿದೆ. ಸರ್ಕಾರ 1000 ಕೋಟಿ ಅನುದಾನ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ವಿದ್ಯಾರ್ಥಿ ವೇತನಕ್ಕೆ ಮೀಸಲಿಟ್ಟಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಜಿ.ಎಂ. ಸಿದ್ದೇಶ್ವರ್, ಜಿಲ್ಲೆಯ ಎಲ್ಲಾ ಶಾಸಕರುಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!