ದುಗ್ಗಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಯಾವ ರಸ್ತೆ ಮೂಲಕ ಬರಬೇಕು, ಎಲ್ಲಿ ವಾಹನ ನಿಲುಗಡೆ ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ
ದಾವಣಗೆರೆ : ನಗರದೇವತೆ ಶ್ರೀ ದುರ್ಗಾಂಭಿಕಾ ಜಾತ್ರೆಯ ಬಂದೋಬಸ್ತ್ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಚಾರದ ಪ್ರಯುಕ್ತ ಪಿ.ಬಿ. ರಸ್ತೆಯ ಅರುಣಾ ಸರ್ಕಲ್‌ನಿಂದ ಹೊಂಡದ ಸರ್ಕಲ್‌ವರೆಗೆ, ಹೊಂಡದ ರಸ್ತೆ ಹಾಗೂ ಹೊಂಡದ ಸರ್ಕಲ್‌ನಿಂದ ಕೋರ್ಟ್ ಸರ್ಕಲ್‌ವರೆಗೆ, ಜಾಲಿನಗರ ೨ನೇ ಮೇನ್, ಮತ್ತು ಶಿವಾಲಿ ರಸ್ತೆಗಳನ್ನು ಮಾ.೧೪ರಿಂದ ಮಾ.೧೬ರವರೆಗೆ ತಾತ್ಕಾಲಿಕವಾಗಿ ಒಮ್ಮುಖ ರಸ್ತೆಗಳನ್ನಾಗಿ ಮಾಡಲಾಗಿದೆ. ಶ್ರೀ ದುರ್ಗಾಂಬಿಕಾದೇವಿ ಜಾತ್ರೆಗೆ ಬರುವ ಸಾರ್ವಜನಿಕರುಗಳು ಅರುಣಾ ಸರ್ಕಲ್‌ನಿಂದ ಹೊಂಡದ ರಸ್ತೆ ಕಡೆಗೆ ಬಂದು ಜಾಲಿನಗರ ೨ನೇ ಮೇನ್ ರಸ್ತೆಯಿಂದ ಶಿವಾಲಿ ರಸ್ತೆಯ ಮೂಲಕ ಕೋರ್ಟ್ ಸರ್ಕಲ್ ಕಡೆಗೆ ಹೋಗಲು ಸೂಚಿಸಿದೆ.
ದೇವರ ದರ್ಶನಕ್ಕೆ ಬರುವ ಭಕ್ತರುಗಳು ತಮ್ಮ ವಾಹನವನ್ನು ನಿಲುಗಡೆ ಮಾಡಲು ಸ್ಥಳಗಳ ವ್ಯವಸ್ಥೆ :
ದುರ್ಗಾಂಬಿಕ ಶಾಲೆ ಆವರಣದ ಒಳಭಾಗದಲ್ಲಿ, ಜಾಲಿನಗರ, ಹೊಂಡದ ವೃತ್ತದ ಪಕ್ಕದಲ್ಲಿರುವ ಮಳಿಗೆ ಹಿಂಭಾಗದ ಸ್ಥಳ, ಬೂದಾಳ್ ರಸ್ತೆ, ದುರ್ಗಾಂಭಿಕಾ ದೇವಸ್ಥಾನ ಮಂಡಳಿಯ ಸ್ಥಳ, (ಮುರುಘರಾಜೇಂದ್ರ ಶಾಲೆ ಎದುರು), ರಾಜ್‌ಕುಮಾರ್ ಶಾಲೆಯ ಹತ್ತಿರ, ಬೂದಾಳ್ ರಸ್ತೆ, ಹಳೇ ರಾಜ್‌ಕುಮಾರ್ ಶಾಲೆ ಹತ್ತಿರ, ಕಾಳಿಕಾದೇವಿ ರಸ್ತೆ, ಮೈಲಾರಲಿಂಗೇಶ್ವರ ದೇವಸ್ಥಾನದ ಹಳೇ ಬೂದಾಲ್ ರಸ್ತೆ ಖಾಲಿ ಜಾಗದ ಅಕ್ಕ ಪಕ್ಕದ ಜಾಗಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತೆ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.