ಮುರುಘಾಮಠ ದ ಭಕ್ತರ ದಾರಿ ತಪ್ಪಿಸಲಾಗುತ್ತಿದೆ: ಬಸವಪ್ರಭು ಸ್ವಾಮೀಜಿ

ಮುರುಘಾಮಠದ ಭಕ್ತರ ದಾರಿ ತಪ್ಪಿಸಲಾಗುತ್ತಿದೆ: ಬಸವಪ್ರಭು ಸ್ವಾಮೀಜಿ

ದಾವಣಗೆರೆ: (Murugha Math) ಚಿತ್ರದುರ್ಗ ಮುರುಘಾಮಠ ದ ಅಧಿಕಾರ ಹಿಡಿಯುವ ಸಂಚು ನಡೆಯುತ್ತಿದೆ ಎಂದು ಮಠದ ಹಾಲಿ ಉಸ್ತುವಾರಿಯೂ, ದಾವಣಗೆರೆ ವಿರಕ್ಥಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ಸಂಜೆ ನಗರದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳು 188ನೇ ಜಯಂತ್ಯುತ್ಸವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿರುವ ಅವರು, ಮಠದ ಅಧಿಕಾರಕ್ಕಾಗಿ ಕೆಲವರು ಭಕ್ತರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀ ಶಿವಮೂರ್ತಿ ಮುರುಘಾ ಶರಣರೇ ಮಠದ ಪರಮ ಪೀಠಾಧಿಪತಿಗಳಾಗಿದ್ದಾರೆ. ಅವರಿಗೆ ಪೂರ್ತಿ ಅಧಿಕಾರವಿದೆ ಎಂಬುದನ್ನು ರಾಜ್ಯ ಉಚ್ಛ ನ್ಯಾಯಾಲಯ ಹೇಳಿದೆ. ಆದರೆ ಕೆಲವರು ಹಾದಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಹೈಕೋರ್ಟ್ ಆದೇಶದಂತೆ ಕಳೆದ ತಿಂಗಳು ಮುರುಘಾ ಮಠದಲ್ಲಿ ಸಭೆ ನಡೆಸಲಾಗಿದೆ. ಮುಂದೆ ಯಾವ ರೀತಿ ನಡೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಕ್ರಿಯಾಯೋಜನೆ ರೂಪಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಕೆಲವರು ಜೂನ್. 25ರಂದು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯಾರೂ ಭಾಗವಹಿಸಬಾರದು ಎಂದು ಶ್ರೀಗಳು ಹೇಳಿದರು.ಮುರುಘಾ ಶರಣರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರ ಬರಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಬಸವಪ್ರಭು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!