ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಆಸ್ತಿ ಎಷ್ಟು ಗೊತ್ತಾ! 3 ಕೋಟಿ ಒಡೆಯನ ಆಸ್ತಿ ಕಂಡು ತಬ್ಬಿಬ್ಬಾದ ಅಧಿಕಾರಿಗಳು.!

ದಾವಣಗೆರೆ : ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಭ್ರಷ್ಟರ ಬೇಟೆಗೆ ಸಜ್ಜಾಗಿ ಕಾರ್ಯಚರಣೆ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ಎಸಿಬಿ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ. ಅದರಲ್ಲೂ ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಅವರ ಆಸ್ತಿ ಇಲ್ಲಿಯವರೆಗೆ ಪತ್ತೆಯಾಗಿರುವ ವಿವರ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಇಂದು  ಎಸಿಬಿ ಅಧಿಕಾರಿಗಳು ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಮಹೇಶ್ವರಪ್ಪ ಅವರಿಗೆ ಸಂಬಂಧಿಸಿದಂತೆ 16 ಎಕರೆ ಜಮೀನು, 10 ಮನೆ, 7 ನಿವೇಶನ, 4 ಕೆಜಿ ಬೆಳ್ಳಿ, 80 ತೊಲ ಬಂಗಾರ, 5 ಲಕ್ಷದ 60 ಸಾವಿರ ರೂ. ನಗದು ಹಣ, 1 ಕಾರು, 3 ಬೈಕ್ ಇರುವ ಮಾಹಿತಿ ಬೆಳಕಿಗೆ ಬಂದಿದೆ. 16 ಎಕರೆ ಜಮೀನಿನಲ್ಲಿ 8 ಎಕರೆ ಕಂಸಾಗರ, 8 ಎಕರೆ ಕೋಟೆಮಲ್ಲೂರು ಗ್ರಾಮದಲ್ಲಿ ಪತ್ತೆಯಾಗಿದೆ. ಇನ್ನೂ 10 ಮನೆ ಇವರ ಹೆಸರಿನಲ್ಲಿ ಪತ್ತೆಯಾಗಿದ್ದು, ದಾವಣಗೆರೆ ನಗರದ ಜಯನಗರ, ರಂಗನಾಥ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹಾಗೆಯೇ 7 ನಿವೇಶನ ಹೊಂದಿದ್ದು, ದಾವಣಗೆರೆಯಲ್ಲಿ 4, ಬೆಂಗಳೂರಿನಲ್ಲಿ 2, ಹರಿಹರದಲ್ಲಿ 1 ನಿವೇಶನ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇವರು 60*40ರಲ್ಲಿ 3 ಮನೆ, 50*40 ರಲ್ಲಿ 1 ಡ್ಯೂಪ್ಲೆಕ್ಸ್ ಮನೆ ಹಾಗೂ 60*60 ರಲ್ಲಿ 6 ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಅವರು ಅಕ್ರಮವಾಗಿ ಸಂಪಾದಿಸಿರುವ ಒಟ್ಟು 3 ಕೋಟಿ ರೂ. ಮೌಲ್ಯದ ಆಸ್ತಿ ಇಲ್ಲಿಯವರೆಗೆ ಎಸಿಬಿ ಅಧಿಕಾರಿಗಳ ಕಾರ್ಯಚರಣೆಯಲ್ಲಿ ಪತ್ತೆಯಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರೆದಿದ್ದು ಇನ್ನೆಷ್ಟು ಮೌಲ್ಯದ ಆಸ್ತಿ ಪತ್ತೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.ದಾವಣಗೆರೆ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ ಮನೆ ಮೇಲೆ ಇಂದು ಬೆಳಗ್ಗೆಯಿಂದ ಎಸಿಬಿ ಅಧಿಕಾರಿಗಳು ಮನೆ, ಕಚೇರಿ, ಸ್ವಗ್ರಾಮ ಸೇರಿ ಮೂರು ಕಡೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ದಾವಣಗೆರೆಯ ರಂಗನಾಥ ಬಡಾವಣೆಯ ಸ್ವಂತ ಮನೆ, ಕಚೇರಿ ಹಾಗೂ ಕಂಸಾಗರದ ಸ್ವ ಗ್ರಾಮದ ಮನೆ ಮೇಲೆ ಏಕಕಾಲಕ್ಕೆ ಎಸಿಬಿ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಮಹೇಶ್ವರಪ್ಪ ಮೂಲತಃ ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮದವರು, ಮಹೇಶ್ವರಪ್ಪ ನವರಿಗೆ ಸೇರಿದಂತಹ ಆಸ್ತಿಗಳ ದಾಖಲೆಗಳನ್ನ ಅಧಿಕಾರಿಗಳ ತಂಡ ಪರಿಶೋಧನೆ ನಡೆಸುತ್ತಿದೆ. ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪನವರ ಬಳಿ ದಾವಣಗೆರೆಯಲ್ಲಿ ಒಟ್ಟು 10 ಮನೆಗಳು, 16 ಎಕರೆ ಜಮೀನು, ಒಂದು ಕಾರ್, ಮೂರು ಬೈಕ್ ಪತ್ತೆಯಾಗಿದ್ದು, ಬೆಳ್ಳಿ, ಬಂಗಾರ, ನಗದು ಕೂಡ ಪತ್ತೆಯಾಗಿದ್ದು ಎಣಿಕೆ ಕಾರ್ಯ ಮುಂದುವರಿದಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!