ದೈಹಿಕ ವಿಕಲಚೇತನರಿಗೆ ಶಾಸಕ ಲಿಂಗಣ್ಣ ತ್ರಿಚಕ್ರ ವಾಹನ ವಿತರಣೆ

ದಾವಣಗೆರೆ: ಶಾಸಕರ ಅನುದಾನದಲ್ಲಿ 13 ಜನ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಆವರಣದಲ್ಲಿ ಶಾಸಕ ಪ್ರೊ. ಎನ್. ಲಿಂಗಣ್ಣ ಸೋಮವಾರ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ.ವಿ.ಮಠದ ಹಾಗೂ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಅಧೀಕ್ಷಕ ಡಾ. ಕೆ.ಕೆ. ಪ್ರಕಾಶ್ ಹಾಜರಿದ್ದರು.