ಜಿಲ್ಲಾ ಮಟ್ಟದ ಚದುರಂಗ (ಚೆಸ್) ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

ದಾವಣಗೆರೆ : ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾಮನೂರು ಶಿವಶಂಕರಪ್ಪ ಜಿಲ್ಲಾ ಕಾಂಗ್ರೆಸ್ ಸಮುದಾಯ ಭವನದಲ್ಲಿ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಶನ್ ವತಿಯಿಂದ ಏರ್ಪಡಿಸಲಾಗಿತ್ತು.
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಜಗಳೂರು ಹೊನ್ನಾಳಿ ಚನ್ನಗಿರಿ ಹರಿಹರ ದಾವಣಗೆರೆ ತಾಲ್ಲೂಕಿನಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು
ಬಹುಮಾನ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಚದುರಂಗದ ಆಟ ಬಹುಮುಖ್ಯ ವಾಗಿ ಕಲಿಯ ಬೇಕು ಏಕೆಂದರೆ ಜೀವನದಲ್ಲಿ ಬರುವ ಕಷ್ಟ ನಷ್ಟಗಳು 7ಬೀಳುಗಳು ಎದುರಿಸುವ ಶಕ್ತಿ ಬರುತ್ತದೆ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದರೂ ಎದುರಿಸುವ ತಾಳ್ಮೆ ಮಕ್ಕಳಲ್ಲಿ ಇರುತ್ತದೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಆದ್ದರಿಂದ ಚೆಸ್ ಆಟವು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸ್ಪರ್ಧೆಯು ಸ್ವಿಸ್ ಲೀಗ್ ಮಾದರಿಯಲ್ಲಿ 7 ಸುತ್ತುಗಳು ನಡೆದವು ಎಂದರೆ ಏಳನೇ ರೌಂಡ್ ನಲ್ಲಿ ದಾವಣಗೆರೆಯ ಆದಿತ್ಯದೀಪಕ್ ಕುಮಾರ್ ಮತ್ತು ಆರ್ಯಮೇಗ ನಡುವೆ ಜಿದ್ದಾಜಿದ್ದಿ ಪಂದ್ಯದಲ್ಲಿ ಆದಿತ್ಯ ದೀಪಕ್ ಕುಮಾರ್ ಜಯಶಾಲಿಯಾಗಿ ಪ್ರಥಮ ಬಹುಮಾನ ಗಳಿಸಿದರು
ನಂತರದ ಸ್ಥಾನದಲ್ಲಿ ದ್ವಿತೀಯ ಸ್ಥಾನವನ್ನು ಧನುಶ್ ಎಂಎಸ್ ಹಾಗೂ ಪುನೀತ್ ಡಿಪಿ ತೃತೀಯ ಸ್ವಯಂ ಎಂಎಸ್ ನಾಲ್ಕನೇಸ್ಥಾನ , ಕಿರಣ್ ಕೆಂಪಗೆ ಐದನೇ ಸ್ಥಾನ ಛಾಯೇಂದ್ರ ಧನು ವಿಜಯ್ ಎಂ ವಿ ವೆಂಕಟೇಶ್ ವಿಕಾಸ್ ಶ್ರೇಯಾನ್ಸ್ ಬಿ ಜೈನ್ ನಂತರದ ಸ್ಥಾನ ಪಡೆದರು.

ಪಂದ್ಯಾವಳಿಯಲ್ಲಿ ವಿಶೇಷ ಬಹುಮಾನವಾಗಿ 8ವರ್ಷದ ಮಕ್ಕಳಲ್ಲಿ ಪ್ರಥಮ ಬಹುಮಾನವನ್ನು ಲಕ್ಷಿತ್ ದಯಾನಂದ ನಂತರದ ಸ್ಥಾನದಲ್ಲಿ ಅಭಿನವ್ ಸಾಧ್ಯತಾಹಿರಾ ಯಶು ಬಿ ಕೆ ಮಾನ್ವಿ ಕೆ ಎ ಪ್ರಣವ್ ಶೇಖರ್ ಪಡೆದರು ಹತ್ತು ವರ್ಷದ ಮಕ್ಕಳ ವಿಭಾಗದಲ್ಲಿ ವೈಷ್ಣವಿ ರವಿ ಪ್ರಥಮ ಸ್ಥಾನವನ್ನು ಮತ್ತು ನಂತರದ ಸ್ಥಾನದಲ್ಲಿ ಅದ್ವಿಕಾ ಡಿ ಬಿ ಕೆ ಲಕ್ಷ್ಮಯ್ ಕಲ್ಯಾಣ್ ಎಎಸ್ ರಾಮ್ ಚಂದನ್ ಅಭಿ ನಂತರದ ಸ್ಥಾನವನ್ನು ಪಡೆದರು ಮತ್ತು ಹನ್ನೆರಡು ವರ್ಷದ ವಿಭಾಗದಲ್ಲಿ ಸೌಜನ್ಯ ವೈ ಎಂ ಪ್ರಥಮ ಸ್ಥಾನವನ್ನು ಜೀವನ್ ಗೌಡ ಮನೋಜ್ ಪಿ ಬಿ ನವೀನ್ ದೀಪ್ ತನ್ಮಯ್ ಕೆಎಂ ನಂತರದ ಸ್ಥಾನವನ್ನು ಪಡೆದರು

ಸಂಜೆ ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಯವರು ಬಹುಮಾನ ವಿತರಣೆ ಮಾಡಿದರು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿಗಳಾದ ಯುವರಾಜ್ ಸಹ ಕಾರ್ಯದರ್ಶಿ ಮಂಜುಳಾ ಅತಿಥಿಗಳಾದ ಕರಿಬಸವರಾಜ್ ಗಂಗಾಧರ್ ಇನ್ನು ಮುಂತಾದವರಿದ್ದರು ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು

Leave a Reply

Your email address will not be published. Required fields are marked *

error: Content is protected !!