ಲೋಕಲ್ ಸುದ್ದಿ

ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾಖಾನ್‌ಗೆ ಜಿಲ್ಲಾ ಟ್ಯಾಕ್ಸಿ ಯೂನಿಯನ್ ಬೆಂಬಲ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೆ. ಅಮನುಲ್ಲಾ ಖಾನ್ ಅವರಿಗೆ ಜಿಲ್ಲಾ ಟ್ಯಾಕ್ಸಿ ಯೂನಿಯನ್ ಬೆಂಬಲ ಸೂಚಿಸಿದೆ.

ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಜೆ. ಅಮನುಲ್ಲಾ ಖಾನ್, ಹಳದಿ ಬೋರ್ಡ್ ಟ್ಯಾಕ್ಸಿ ಮಾಲಿಕರು ಅತಿ ಹೆಚ್ಚು ಸಾರಿಗೆ ತೆರಿಗೆ ಪಾವತಿ ಮಾಡಿದರು ಕೂಡ ಸರ್ಕಾರದಿಂದ ಅವರಿಗೆ ಹೆಚ್ಚಿನ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಬಡ ಚಾಲಕರಿಗೆ ಟ್ರಾಕ್ಸಿ ಖರೀದಿಸಲು ಸಬ್ಸಿಡಿ ದರದಲ್ಲಿ ಸರ್ಕಾರಿ ಬ್ಯಾಂಕ್  ಗಳಿಂದ ಸಾಲ ನೀಡುವ ಆನೇಕ ಸರ್ಕಾರಿ ಯೋಜನೆಗಳು ಬಡ ಚಾಲಕರಿಗೆ ಇದೆ. ಆದರೆ ಇಂತಹ ಜನಪರ ಯೋಜನೆಗಳು ಸ್ಥಳೀಯ ಶಾಸಕರ ಹಿಂಬಾಲಕರ ಪಾಲಾಗುತ್ತಿವೆ ಎಂದು ದೂರಿದರು.

ದಾವಣಗೆರೆ ನಗರದಲ್ಲಿ ಟ್ಯಾಕ್ಸಿ ನಿಲ್ದಾಣ ಅವಶ್ಯಕತೆ ಇದ್ದರೂ ಯಾವ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಟ್ಯಾಕ್ಸಿ ಚಾಲಕರಿಗೆ ಆರ್‌ಟಿಓ ಕಚೇರಿಯಲ್ಲಿ ಬ್ಯಾಡ್ಜ್ ನೀಡಲು ಹಾಗೂ ಇತರೆ ಕೆಲಸಕ್ಕೆ ಬಹಳ ಸತಾಯಿಸುತ್ತಿರುವುದು ಸರಿಯಲ್ಲ. ಇದೆ ರೀತಿ ಮುಂದುವರೆದರೆ ಪ್ರತಿಭಟನೆಂ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟ್ಯಾಕ್ಸಿ ಚಾಲಕರಿಗೆ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಸೇರಿಸಿ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಹೆಚ್. ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು, ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತಂದರೆ ಟ್ಯಾಕ್ಸಿ ಚಾಲಕರಿಗು ಕೂಡ ಆನೇಕ ಸೌಲಭ್ಯ ಕಲ್ಪಿಸುತ್ತೆವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಯು.ಎಂ ಮನ್ಸೂರ್ ಅಲಿ, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ನಜ್ರುಲ್ಲಾ ಸಾಬ್, ಉಪಾಧ್ಯಕ್ಷ ಸೈಯದ್ ಅಜೀಮ್ ಸಾಬ್, ಇಮ್ರಾನ್ ಅಲಿ, ನೂರಾಹಮದ್ ಮತ್ತಿತರರು ಉಪಸ್ಥಿತರಿದ್ದರು

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!