ಡಿಕೆಶಿ ತಮ್ಮ ತೆವಲು ತೀರಿಸಿಕೊಳ್ಳಲು ದೇವೇಂದ್ರಪ್ಪಗೆ ಟಿಕೆಟ್ ನೀಡಿದ್ದಾರೆ – ಹೆಚ್ ಪಿ ರಾಜೇಶ್
ದಾವಣಗೆರೆ: ಜಗಳೂರು ಕಾಂಗ್ರೆಸ್ ಟಿಕೆಟ್ ಹಂಚಿಗೂ ಕಾಂಗ್ರೆಸ್‌ನ ನಾಯಕ ಡಿ.ಕೆ. ಶಿವಕುಮಾರ್ ಅವರ ಇಡಿ ಕೇಸ್ ಗೂ ಸಂಬಂಧ ಇದೆಯಾ?
ಈ ರೀತಿಯ ಅನುಮಾನದ ಮಾತುಗಳು ದಾವಣಗೆರೆ ಜಿಲ್ಲೆ ಹಾಗೂ ಜಗಳೂರು ಕ್ಷೇತ್ರದಾದ್ಯಂತ ಕೇಳಿ ಬರ ತೊಡಗಿವೆ. ಅಷ್ಟೇ ಅಲ್ಲ, ಕ್ಷೇತ್ರದ ಟಿಕೆಟ್‌ಗೆ ಪ್ರಭಲ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಅವರ ನೇರ ಅರೋಪವೂ ಹೌದು.
ಜಗಳೂರು ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಗೂ, ಡಿ.ಕೆ. ಶಿವಕುಮಾರ್ ಅವರ ಇಡಿ ಕೇಸ್‌ಗೂ ಸಂಬಂಧ ಇದೆಯಂತೆ. ತಮ್ಮ ಇಡಿ ಕೇಸ್‌ಗೆ ಅನುಕೂಲವಾಗಲಿ ಎಂದೇ ಡಿಕೆಶಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಿದ್ದಾರಂತೆ.
ಅಂದ ಹಾಗೆ ಜಗಳೂರು ಕ್ಷೇತ್ರದ ಟಿಕೆಟ್ ನಿಷ್ಠಾವಂತರಾಗಿದ್ದ ಮಾಜಿ ಶಾಸಕ ರಾಜೇಶ್ ಬದಲು, ಆದಾಯ ತೆರಿಗೆ ಇಲಖೆ ಅಧಿಕಾರಿಯ ತಂದೆ ಪಾಲಾಗಿದೆ ಎಂದು ಹೇಳಲಾಗುತ್ತಿದೆ.
ಜಗಳೂರು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರು ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿ ವಿಜಯ ಕುಮಾರ್ ಅವರ ತಂದೆ. ಡಿ.ಕೆ.ಶಿವಕುಮಾರ್ ಫೈಲ್ ಗಳು ಇರೋದೇ ವಿಜಯ ಕುಮಾರ್ ಬಳಿ ಎನ್ನಲಾಗಿದೆ.
ಇದೇ ಕಾರಣಕ್ಕಾಗಿಯೇ ಡಿಕೆಶಿ ಹಾಗೂ ಎಂ.ಬಿ.ಪಾಟೀಲ್ ಸೇಫ್ ಆಗಿರಲು ವಿಜಯ ಕುಮಾರ್ ತಂದೆಗೆ ಟಿಕೆಟ್ ನೀಡಿದ್ದಾರೆ ಎನ್ನುವುದು ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್ ಗಂಭೀರ ಆರೋಪವೂ ಹೌದು.
ಡಿಕೆಶಿ ತಮ್ಮ ತೆವಲು ತೀರಿಸಿಕೊಳ್ಳಲು ದೇವೇಂದ್ರಪ್ಪಗೆ ಟಿಕೆಟ್ ನೀಡಿದ್ದಾರೆ ಎಂದು ರಾಜೇಶ್ ನೇರವಾಗಿಯೇ ಆರೋಪಿಸಿದ್ದಾರೆ.