ಹಿಜಾಬ್ ನಿಷೇಧಿಸಿರುವ ದೇಶಗಳಾವುವು ಗೊತ್ತಾ?
ಬೆಂಗಳೂರು : ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಕಡ್ಡಾಯ ಶಾಲಾ ಸಮವಸ್ತ ನೀತಿಯನ್ನು ಎತ್ತಿಹಿಡಿದಿದೆ. ಕರ್ನಾಟಕ ಹೈಕೋರ್ಟ್ ಮಂಗಳವಾರ (ಮಾರ್ಚ್.15) ಹಿಜಾಬ್ ವಿವಾದದ ತೀರ್ಪು ಪ್ರಕಟಿಸಿದೆ. ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹಿಜಾಬ್ ನಿರ್ಬಂಧ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ. ಕೆಲವರು ಕೋರ್ಟ್ ತೀರ್ಪನ್ನು ಸ್ವಾಗತಿಸಿದರೆ ಇನ್ನೂ ಕೆಲವರು ತೀರ್ಪನ್ನು ಅಲ್ಲ ಗಳೆದಿದ್ದಾರೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಜನವರಿ 1 ರಂದು ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಕರಾವಳಿ ಪಟ್ಟಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕಾಲೇಜು ಅಧಿಕಾರಿಗಳು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸುವುದನ್ನು ವಿರೋಧಿಸಿದರು. ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಯನ್ನು ಕೋರಿದರು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು. ಆದರೆ ಅದನ್ನು ತೆಗೆದು ತರಗತಿಗೆ ಪ್ರವೇಶಿಸುವಂತೆ ಹಿಂದೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಕಾಲೇಜಿನಲ್ಲಿರುವ ಸಮವಸ್ತವನ್ನೇ ಧರಿಸಬೇಕು ಎಂದು ಪ್ರತಿಭಟನೆಗಳಾದವು.
ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಮಾತನಾಡಿ “ಕಳೆದ 35 ವರ್ಷಗಳಲ್ಲಿ ಯಾರೂ ಹಿಜಾಬ್ ಧರಿಸದೆ ವಿದ್ಯಾರ್ಥಿಗಳು ತರಗತಿಗೆ ಬರಬಾರದು ಎನ್ನುವ ನಿಯಮವನ್ನಾಗಲಿ ಸೂಚನೆಯನ್ನಾಗಲಿ ಸಂಸ್ಥೆ ನೀಡಿಲ್ಲ. ಆದರೆ ಈ ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ” ಎಂದು ಹೇಳಿದ್ದರು. ಬಳಿಕ ಹಿಜಾಬ್ ವರ್ಸಸ್ ಕೇಸರಿ ಸ್ಕಾರ್ಫ್ ಸಮಸ್ಯೆ ಕರ್ನಾಟಕದ ಹಲವು ಭಾಗಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹರಡಿತು. ರಾಜ್ಯ ಸರ್ಕಾರವು ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಮತ್ತು ಫೆಬ್ರವರಿ 9 ರಿಂದ ಫೆಬ್ರವರಿ 16 ರವರೆಗೆ ಪದವಿ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಿತು. ನಂತರ ಹುಡುಗಿಯರು ಪರಿಹಾರ ಕೋರಿ ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋದರು. ಫೆಬ್ರವರಿ 5 ರಂದು ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಬಟ್ಟೆಯನ್ನು ಧರಿಸುವುದನ್ನು ನಿರ್ಬಂಧಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಿದರು.
ಹೈಕೋರ್ಟ್ನ ಪೂರ್ಣ ಪೀಠವು ಫೆಬ್ರವರಿ 10 ರಿಂದ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸುತ್ತಿದೆ. ತನ್ನ ಮಧ್ಯಂತರ ಆದೇಶದಲ್ಲಿ, ಪೀಠವು ಆಂದೋಲನದಿಂದ ನಲುಗಿರುವ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವAತೆ ರಾಜ್ಯ ಸರ್ಕಾರವನ್ನು ಕೇಳಿದೆ ಮತ್ತು ತಡೆಯಾಜ್ಞೆ ನೀಡಿದೆ. ಸದ್ಯ ಅಂತಿಮ ಆದೇಶ ಹೊರಬಂದಿದ್ದು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಮತ್ತು ಕೇಸರಿ ಸ್ಕಾರ್ಫ್ಗಳನ್ನು ಧರಿಸುವಂತಿಲ್ಲ. ಹೀಗೆ ಹಲವಾರು ದೇಶಗಳು ಹಿಜಾಬ್ ಮುಖ ಮತ್ತು ತಲೆಯ ಹೊದಿಕೆಗಳನ್ನು ನಿಷೇಧಿಸಿವೆ. ಅವುಗಳನ್ನು ನೋಡುವುದಾದರೆ. ಮುಖ ಮತ್ತು ತಲೆಯ ಹೊದಿಕೆಗಳನ್ನು ನಿಷೇಧಿಸಿದ ರಾಷ್ಟ್ರಗಳಿವು ಫ್ರಾನ್ಸ್, ಸ್ವಿಟ್ಜರ್ಲೆಂಡ್, ಟರ್ಕಿ, ಡೆನ್ಮಾರ್ಕ್, ಬೆಲ್ಜಿಯಂ, ನೆದರ್ಲಾ್ಯಂಡ್ಸ್, ಇಟಲಿ, ಆಸ್ಟ್ರಿಯಾ, ಬಲ್ಗೇರಿಯಾ, ಶ್ರೀಲಂಕಾ, ರಷ್ಯಾ,