ಲೋಕಲ್ ಸುದ್ದಿ

ದಾವಣಗೆರೆ ಜಿಲ್ಲೆಯ ಯಾವ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತೆ?

ದಾವಣಗೆರೆ ಜಿಲ್ಲೆಯ ಯಾವ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತೆ?

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಕಾವು ಏರಿದ್ದು, ನಿನ್ನೆ ಸೋಮವಾರ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಆಸ್ತಿ ವಿವರನ್ನೂ ಬಹಿರಂಗ ಪಡಿಸಿದ್ದಾರೆ.

ಈ ಪೈಕಿ ಪ್ರಮುಖರ ಆಸ್ತಿ ಎಷ್ಟಿದೆ? ಇಲ್ಲಿದೆ ನೋಡಿ ಮಾಹಿತಿ.

ಬಿ.ಜಿ. ಅಜಯ್ ಕುಮಾರ್ (ದಾವಣಗೆರೆ ದಕ್ಷಿಣ – ಬಿಜೆಪಿ) : 2.18 ಕೋಟಿ ರೂ.ಗಳ ಚರಾಸ್ತಿ ಇದೆ. ಪತ್ನಿ ಮಂಗಳ 36.20 ಲಕ್ಷ ರೂ., ಮಗಳು ಬಿ.ಎ. ನೇಹ 19.37 ಲಕ್ಷ ರೂ., ಮಗ ಎ.ಜಿ. ಭರತ್ 40.41 ಲಕ್ಷ ರೂ. ಹಾಗೂ ತಾಯಿ ಜಯಮ್ಮ 5 ಸಾವಿರ ರೂ. ಚರಾಸ್ತಿ ಹೊಂದಿದ್ದಾರೆ.

ಅಜಯ್ ಕುಮಾರ್ ಬಳಿ 8.72 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ. ಪತ್ನಿ ಮಂಗಳ 40.10 ಲಕ್ಷ ರೂ., ಮಗಳು ನೇಹ 5 ಲಕ್ಷ ರೂ. ಹಾಗೂ ಮಗ ಭರತ್ 19 ಲಕ್ಷ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ.

ಅಜಯ್ ಕುಮಾರ್ ಹೊಣೆಗಾರಿಕೆ 1.02 ಕೋಟಿ ರೂ. ಮತ್ತು ಮಗ ಭರತ್ ಹೊಣೆಗಾರಿಕೆ 11.45 ಲಕ್ಷ ರೂ.

ಲೋಕಿಕೆರೆ ನಾಗರಾಜ್ (ದಾವಣಗೆರೆ ಉತ್ತರ – ಬಿಜೆಪಿ) : ಚರಾಸ್ತಿ ಮೌಲ್ಯ 4.48 ಕೋಟಿ ರೂ. ಹಾಗೂ ಪತ್ನಿ ಎನ್. ಲತಾ ಹೊಂದಿರುವ ಚರಾಸ್ತಿ 92.62 ಲಕ್ಷ ರೂ.

ನಾಗರಾಜ್ ಹೊಂದಿರುವ ಸ್ಥಿರಾಸ್ತಿ 8.92 ಕೋಟಿ ರೂ. ಅವರು ಹೊಂದಿರುವ ಹೊಣೆಗಾರಿಕೆ 3.47 ಕೋಟಿ ರೂ. ಪತ್ನಿ ಲತಾ ಹೊಣೆಗಾರಿಕೆ 12.90 ಲಕ್ಷ ರೂ.

ಹೆಚ್.ಎಸ್. ಶಿವಶಂಕರ್ (ಹರಿಹರ – ಜೆಡಿಎಸ್‌) : ಚರಾಸ್ತಿ ಮೌಲ್ಯ 1 ಕೋಟಿ ರೂ. ಸ್ಥಿರಾಸ್ತಿಗಳ ಒಟ್ಟು ಮೌಲ್ಯ 7.48 ಕೋಟಿ ರೂ. ಹಾಗೂ ಹೊಣೆಗಾರಿಕೆಗಳು 64.65 ಲಕ್ಷ ರೂ.

ಡಿ.ಜಿ. ಶಾಂತನಗೌಡ (ಹೊನ್ನಾಳಿ – ಕಾಂಗ್ರೆಸ್‌) : ಚರಾಸ್ತಿ ಮೌಲ್ಯ 69.05 ಲಕ್ಷ ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 39.49 ಲಕ್ಷ ರೂ.

ಪತ್ನಿ ರತ್ನಮ್ಮ ಹೊಂದಿರುವ ಚರಾಸ್ತಿ 67.87 ಲಕ್ಷ ರೂ. ಮಗ ಡಿ.ಎಸ್. ಪ್ರದೀಪ್ 1.51 ಕೋಟಿ ರೂ., ಸುರೇಂದ್ರ 1.09 ಕೋಟಿ ರೂ., ಸೊಸೆ ಪಿ. ಸೌಮ್ಯ 81.51 ಲಕ್ಷ ರೂ. ಹಾಗೂ ಸೊಸೆ ಎ.ಎನ್. ವಾಣಿ ಹೊಂದಿರುವ ಚರಾಸ್ತಿ 1.44 ಕೋಟಿ ರೂ.

ಶಾಂತನಗೌಡ ಹೊಣೆಗಾರಿಕೆ 28.72 ಲಕ್ಷ ರೂ. ಪತ್ನಿ ರತ್ನಮ್ಮ 1.75 ಲಕ್ಷ ರೂ., ಮಗ ಡಿ.ಎಸ್. ಪ್ರದೀಪ್ 2.50 ಲಕ್ಷ ರೂ., ಸುರೇಂದ್ರ 3.41 ಕೋಟಿ ರೂ. ಹಾಗೂ ಸೊಸೆ ವಾಣಿ ಹೊಣೆಗಾರಿಕೆ 48 ಲಕ್ಷ ರೂ. ಆಗಿದೆ.

ಹೆಚ್. ಆನಂದಪ್ಪ (ಮಾಯಕೊಂಡ – ಜೆಡಿಎಸ್‌) : ಚರಾಸ್ತಿಯ ಮೌಲ್ಯ 57.45 ಲಕ್ಷ ರೂ., ಪತ್ನಿ ನಿರ್ಮಲಮ್ಮ 30.31 ಲಕ್ಷ ರೂ., ಮಗ ಮಲ್ಲಿಕಾರ್ಜುನ 1.62 ಕೋಟಿ ರೂ., ಮಗ ರುದ್ರೇಶ್‌ ಚರಾಸ್ತಿ ಮೌಲ್ಯ 22.53 ಲಕ್ಷ ರೂ.

ಆನಂದಪ್ಪ ಹೊಂದಿರುವ ಸ್ಥಿರಾಸ್ತಿ ಮೌಲ್ಯ 7.10 ಕೋಟಿ ರೂ.. ಪತ್ನಿ ನಿರ್ಮಲಮ್ಮ 5 ಕೋಟಿ ರೂ. ಹಾಗೂ ಮಗ ಮಲ್ಲಿಕಾರ್ಜುನ 8 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಎಂ. ಬಸವರಾಜ ನಾಯ್ಕ (ಮಾಯಕೊಂಡ – ಬಿಜೆಪಿ ) : 27 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಪತ್ನಿ 55 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ಬಸವರಾಜನಾಯ್ಕ ಹೊಂದಿರುವ ಸ್ಥಿರಾಸ್ತಿ 4 ಕೋಟಿ ರೂ. ಹಾಗೂ ಪತ್ನಿ 12 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಕೆ.ಎಸ್. ಬಸವಂತಪ್ಪ (ಮಾಯಕೊಂಡ – ಕಾಂಗ್ರೆಸ್) : ಚರಾಸ್ತಿಯ ಮೌಲ್ಯ 18.70 ಲಕ್ಷ ರೂ. ಪತ್ನಿ ಮಮತ ಚರಾಸ್ತಿ 4.61 ಲಕ್ಷ ರೂ. ಬಸವಂತಪ್ಪ ಹೊಂದಿರುವ ಸ್ಥಿರಾಸ್ತಿ ಮೌಲ್ಯ 78 ಲಕ್ಷ ರೂ. ಹಾಗೂ ಹೊಣೆಗಾರಿಕೆ 3.25 ಲಕ್ಷ ರೂ.

ಶಾಮನೂರು ಶಿವಶಂಕರಪ್ಪ 337.49 ಕೋಟಿ ರೂಗಳ ಒಡೆಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು 337.49 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ !

ಹೌದು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿರುವ ಅವರು ತಮ್ಮ ಆಸ್ತಿ ವಿವರವನ್ನೂ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು 257.83 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ 19.66 ಕೋಟಿ ರೂ.ಗಳ ಚರಾಸ್ತಿ ಮಾಲೀಕರಾಗಿದ್ದಾರೆ. 35 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ 25 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 337.49 ಕೋಟಿ ರೂ. ಆಗಿದೆ. 15.71 ಕೋಟಿ ರೂ.ಗಳ ಹೊಣೆಗಾರಿಕೆ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ ಹೊಂದಿರುವ ಹೊಣೆಗಾರಿಕೆ 2.02 ಕೋಟಿ ರೂ.ಗಳಷ್ಟಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!