ಪಿಎಫ್ ಖಾತೆಗೆ ನಾಮಿನಿ ಸೇರ್ಪಡೆಗೆ ಕೊನೆಯ ದಿನ ಯಾವಾಗ ಗೊತ್ತಾ?
ನವದೆಹಲಿ : ನಿಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಗೆ ನಾಮಿನಿ ಸೇರ್ಪಡೆ ಮಾಡಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮತ್ತೊಮ್ಮೆ ತನ್ನ ಚಂದಾದಾರರಿಗೆ ತಮ್ಮ ಪಿಎಫ್ ಖಾತೆಗಳ ಇ-ನಾಮಿನೇಷನ್ ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಮಾರ್ಚ್ 31 ರೊಳಗೆ ಪೂರ್ಣಗೊಳಿ ಸುವಂತೆ ಒತ್ತಾಯಿಸಿದೆ. ಇನ್ನು ಈ ಬಗ್ಗೆ ಎಚ್ಚರಿಕೆಯನ್ನು ಕೂಡಾ ಇಪಿಎಫ್ಒ ನೀಡಿದೆ. ಈ ದಿನಾಂಕಕ್ಕೂ ಮುನ್ನ ಇಪಿಎಫ್ಒ ಚಂದಾದಾರರು ಇ ನಾಮಿನೇಷನ್ ಮಾಡಲು ವಿಫಲರಾದರೆ ನಿವೃತ್ತಿ ಸಂದರ್ಭದಲ್ಲಿ ಈ ಸಂಸ್ಥೆಯಿಂದ ಒದಗಿಸಲಾದ ಕೆಲವು ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಹೇಳಿಕೆಯನ್ನು ನೀಡಿದ ಇಪಿಎಫ್ಒ “ಚಂದಾದಾರರು ತಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರನ್ನು ನೋಡಿಕೊಳ್ಳಲು ಮತ್ತು ಆನ್ಲೈನ್ ಪಿಎಫ್, ಪಿಂಚಣಿ ಮತ್ತು ವಿಮೆಯ ಮೂಲಕ ಅವರನ್ನು ರಕ್ಷಿಸಲು ಇಪಿಎಫ್ ಖಾತೆಗೆ ನಾಮಿನೇಷನ್ ಮಾಡುವುದು ಬಹಳ ನಿರ್ಣಾಯಕವಾಗಿದೆ,” ಎಂದು ಹೇಳಿದೆ. ಇ-ನಾಮಿನೇಷನ್ ಸಲ್ಲಿಸುವುದರಿಂದ ಯಾವುದೇ ಅಪಘಾತದ ಸಂದರ್ಭದಲ್ಲಿ ಪಿಎಫ್ ಖಾತೆದಾರರ ಅವಲಂಬಿತರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇ ನಾಮಿನೇಷನ್ ಮಾಡಿದ ಬಳಿಕ ಖಾತೆದಾರರಿಗೆ ಯಾವುದೇ ಅವಘಡಗಳು ಸಂಭವಿಸಿದರೆ ನಾಮಿನಿಯು ವಿಮೆ ಮತ್ತು ಪಿಂಚಣಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. PF ಖಾತೆದಾರರು EPFO ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಇ-ನಾಮಿನಿ ಫಾರ್ಮ್ ಮೂಲಕ ಆನ್ಲೈನ್ನಲ್ಲಿ ತಮ್ಮ ನಾಮಿನೇಷನ್ ಅನ್ನು ಸಲ್ಲಿಸಬಹುದು.
ನಿಮ್ಮ PF ಖಾತೆಗೆ ಇ-ನಾಮಿನೇಷನ್ ಅನ್ನು ಹೇಗೆ ಸಲ್ಲಿಸುವುದು?
ಮೊದಲು EPFO ವೆಬ್ಸೈಟ್ epfindia.gov.in. ಭೇಟಿ ನೀಡಿ
*’Services’ ಆಯ್ಕೆಯ ಕೆಳಗೆ ‘For Employees’ ಅನ್ನು ಆಯ್ಕೆ ಮಾಡಿ
*’Member UAN/Online Service (OCS/OTCP)’ ಆಯ್ಕೆಯನ್ನು ಕ್ಲಿಕ್ ಮಾಡಿ
* ನಿಮ್ಮ UAN ಮತ್ತು ಪಾಸ್ವರ್ಡ್ ಬಳಸಿ ವೆಬ್ಸೈಟ್ಗೆ ಲಾಗ್ ಇನ್ ಮಾಡಿ
* ‘Manage’ ಪೇಜ್ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು,’yes’ ಎಂದು ಕ್ಲಿಕ್ ಮಾಡಿ
* ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ ‘Add New’ ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆಯು ಅಂತ್ಯವಾಗಲಿದೆ. ಒಮ್ಮೆ ನೀವು ನಿಮ್ಮ ಕುಟುಂಬದ ಮಾಹಿತಿಯನ್ನು ಹಾಕಿದರೆ ನಿಮ್ಮ ಇ-ನಾಮಿನೇಷನ್ ನಿಮ್ಮ PF ಖಾತೆಗೆ ಸಲ್ಲಿಸಲಾಗುತ್ತದೆ. ಕೊನೆಯ ದಿನಾಂಕವಾದ ಮಾರ್ಚ್ 31, 2022 ರ ಮೊದಲು ನಾಮಿನಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿದೆ ಎಂಬುವುದನ್ನು ನೆನಪಿನಲ್ಲಿ ಇಡಿ.
ಪಿಎಫ್ ಬಡ್ಡಿದರ ಕನಿಷ್ಠ ಮಟ್ಟಕ್ಕೆ ಇಳಿಕೆ!
ಉದ್ಯೋಗಿಗಳ 2021-22ರ ವರ್ಷದ ಭವಿಷ್ಯ ನಿಧಿ ಬಡ್ಡಿದರವನ್ನು ಶೇಕಡ 8.5ರಿಂದ ಶೇಕಡ 8.1ಕ್ಕೆ ಇಳಿಕೆ ಮಾಡಲಾಗಿದೆ. 021-22 ರ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರವನ್ನು 2021-22 ಕ್ಕೆ ಅಸ್ತಿತ್ವದಲ್ಲಿರುವ ಶೇಕಡಾ 8.5 ರಿಂದ 8.1 ಕ್ಕೆ ಕಡಿತಗೊಳಿಸಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. 1977-78ರ ನಂತರದ ಅತ್ಯಂತ ಕಡಿಮೆ ದರ ಇದಾಗಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸುಮಾರು ಐದು ಕೋಟಿ ಚಂದಾದಾರರನ್ನು ಹೊಂದಿದ್ದು, ಈ ಚಂದಾದಾರರಿಗೆ 2021-22ರ ತಮ್ಮ ಪಿಎಫ್ ಬಡ್ಡಿದರವು 8.1ಕ್ಕೆ ಆಗಿದೆ.