ಶಂಭುಲಿಂಗಪ್ಪ ನಲ್ಲನವರಿಗೆ ಡಾಕ್ಟರೇಟ್ ಪದವಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಂಭುಲಿಂಗಪ್ಪ ನಲ್ಲನವರಿಗೆ ಬಳ್ಳಾರಿ ಶ್ರಿ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

ಸಹ ಪ್ರಾಧ್ಯಾಪಕರಾದ ಡಾ ರವಿ ಬಿ ಅವರ ಮಾರ್ಗದರ್ಶನದಲ್ಲಿ ” ಕರ್ನಾಟಕದಲ್ಲಿ ಸಿಮೆಂಟ್ ಉದ್ಯಮದ ಹಣಕಾಸಿನ ಕಾರ್ಯಕ್ಷಮತೆ – ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.

ಶಂಭುಲಿಂಗಪ್ಪ ನಲ್ಲನವರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದ ನಿವೃತ್ತ ಶಿಕ್ಷಕರಾದ ಫಕ್ಕಿರಪ್ಪ ನಲ್ಲನವರ ಮತ್ತು ನೀಲವ್ವ ನಲ್ಲನವರ ದಂಪತಿಗಳ ಪುತ್ರನಾಗಿರುತ್ತಾರೆ.ಡಾಕ್ಟರೇಟ್ ಪದವಿ ಪಡೆದ ಸಹಾಯಕ ಪ್ರಾಧ್ಯಾಪಕರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ ದಾದಾಪೀರ ಬಿ ಸಿ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ತಹಸಿಲ್ದಾರ್ ಬಿ ಸಿ ಪ್ರಾಧ್ಯಾಪಕರಾದ ಡಾ ಮಂಜುನಾಥ ಜೆ ಎಂ ಸುನೀತಾ ಕೆ ಬಿ ರಾಮಮೋಹನ ಎನ್ ಆರ್ ಡಾ ನಾಗರಾಜ ಆರ್ ಸಿ ಡಾ ಯಶೋಧ ಆರ್ ಚನ್ನಬಸಪ್ಪ ಎಸ್ ಎನ್ ವೆಂಕಟೇಶ್ ಬಾಬು ಎಸ್ ನಿಂಗಪ್ಪ ಟಿ ರೇಖಾ ಬಿ ವಿ ಸುರೇಖಾ ಆರ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!