Leopard:ಕುಂದುವಾಡ ಕೆರೆ ಬಳಿ ಚಿರತೆ ಪ್ರತ್ಯಕ್ಷವಾಗಿಲ್ಲ.! ಭಯಪಡಬೇಡಿ ಎಂದ ಅರಣ್ಯ

cheetah not found in Davanagere forest department clarify

ದಾವಣಗೆರೆ: ದಾವಣಗೆರೆ ನಗರದ ಹೊಸ ರಿಂಗ್ ರಸ್ತೆ ಮತ್ತು ಬಾಲಾಜಿನಗರ ಕುಂದವಾಡ ಕೆರೆ ಸುತ್ತಮುತ್ತ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಇರುವ ಬಗ್ಗೆ ವಿಡಿಯೋ ಹಾಗೂ ಫೋಟೋ ಹರಿದಾಡುತ್ತಿದ್ದು ಈ ಬಗ್ಗೆ ನಿಮ್ಮ ಗರುಡ ವಾಯ್ಸ್ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಲಿಖಿತ ರೂಪದಲ್ಲಿ ಅರಣ್ಯ ಇಲಾಖೆಗೆ ಸ್ಪಷ್ಟೀಕರಣಕ್ಕಾಗಿ ಕೇಳಿಕೊಂಡಿತ್ತು ಈ ಸಂಬಂಧ ಅರಣ್ಯ ಇಲಾಾಖೆ ಸ್ಪಷ್ಟೀಕರಣ ನೀಡಿದೆ.

ದಿನಾಂಕ:27/08/2021 ರಂದು ಸೋಶಿಯಲ್ ಮೀಡಿಯಾದಲ್ಲಿ ಚಿರತೆಯೊಂದು ಕುಂದವಾಡ ಕೆರೆ ಆಸು-ಪಾಸಿನಲ್ಲಿ ಕಾಣಿಸಿಕೊಂಡಿರುವುದಾಗಿ ವೀಡಿಯೊ ಮತ್ತು ಆಡಿಯೊ ಹರಿಬಿಟ್ಟಿರುತ್ತಾರೆ. ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಹಗಲು-ರಾತ್ರಿ ಗಸ್ತು ತಿರುಗುತ್ತಿದ್ದು ವೀಡಿಯೊದಲ್ಲಿರುವ ಸ್ಥಳ ಕುಂದುವಾಡ ಕೆರೆ ಆಸುಪಾಸಿನಲ್ಲಿ ಇರುವುದು ಕಂಡುಬಂದಿರುವುದಿಲ್ಲ. ಸದರಿ ವಿಷಯಕ್ಕೆ ಸಂಬಂದಿಸಿದಂತೆ ದಾವಣಗೆರೆ ನಗರ ವಾಸಿಗಳು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುತ್ತದೆ. ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಸದರಿ ವೀಡಿಯೊವನ್ನು ಮಾಡಿರುವವರು ಈ ಕೂಡಲೇ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಲು ಕೋರುವುದರೊಂದಿಗೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದೆ.

ದೂರವಾಣಿ ಸಂಖ್ಯೆಗಳು

*ವಲಯ ಅರಣ್ಯ ಅಧಿಕಾರಿಗಳು-9448233584*
*ಉಪ ವಲಯ ಅರಣ್ಯ ಅಧಿಕಾರಿಗಳು-8970890790*
*ಅರಣ್ಯರಕ್ಷಕರು-7026363363*

Leave a Reply

Your email address will not be published. Required fields are marked *

error: Content is protected !!