ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಮತ ಯಾಚಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್.

ದಾವಣಗೆರೆ :ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 2,3,4ನೇ ವಾರ್ಡ್ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಡಾ. ಶಾಮನೂರು ಶಿವಶಂಕರಪ್ಪ ನವರ ಪರವಾಗಿ ಮತಯಾಚಿಸಿದರು.
ಕ್ಷೇತ್ರದಲ್ಲಿ ನಮ್ಮ ಮಾವನವರಾದ ಡಾ. ಶಾಮನೂರು ಶಿವಶಂಕರಪ್ಪ ರವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಚುನಾವಣೆಯಲ್ಲು ಸಹ ಅವರನ್ನು ಗೆಲ್ಲಿಸುವ ಮೂಲಕ, ಮುಂದಿನ ದಿನಗಳಲ್ಲಿ ಮತ್ತೆ ಅವರಿಗೆ ಅವಕಾಶ ನೀಡಬೇಕಾಗಿ ವಿನಂತಿಸಿದರು.
5ನೇ ಬಾರಿ ಅವರಿಗೆ ಬೆಂಬಲವಾಗಿ ನಿಂತ ನಿಮಗೆ ಧನ್ಯವಾದಗಳು ಹಾಗೂ 6ನೇ ಬಾರಿಯ ಗೆಲುವಿಗೆ ತಾವುಗಳು ಕೈಜೋಡಿಸಬೇಕಾಗಿ ಕೋರಿದರು.