ವಿವಿ ಕುಲಪತಿಯಾಗಿ ಡಾ ಬಿ ಕೆ ರವಿ ನೇಮಕ:ಬಿ ಎಂ ಸತೀಶ್ ಹರ್ಷ

ಬೆಂಗಳೂರು :ನೂತನ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿಯನ್ನಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಕಾರ್ಯಾಧ್ಯಕ್ಷ ಪ್ರೋ.ಬಿ ಕೆ ರವಿಯವರನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಸಂಚಾಲಕ ಕೊಳೇನಹಳ್ಳಿ ಬಿ ಎಂ ಸತೀಶ್ ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಲಿ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಡಾ.ಬಿ.ಕೆ.ರವಿಯವರನ್ನು ನೇಮಕ ಮಾಡಿರುವುದರಿಂದ ರಾಜ್ಯದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿದೆ. ಹಿಂದುಳಿದವರ ಹಿತಾಸಕ್ತಿ ಬಗ್ಗೆ ಉದ್ದುದ್ದ ಭಾಷಣ ಮಾಡಿ, ಕೇವಲ ಮಾತಿನಲ್ಲಿ ಬದ್ಧತೆ ತೋರಿಸಿ, ಕೃತಿಯಲ್ಲಿ ಏನು ಮಾಡದಿರುವ ರಾಜಕಾರಣಿಗಳಿಗಿಂತ ತಾನು ವಿಭಿನ್ನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಬೀತು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿಯವರಿಗೆ ಮತ್ತು ಬಿಜೆಪಿ ಸರ್ಕಾರಕ್ಕೆ ಕುರುಬ ಸಮುದಾಯದ ಪರವಾಗಿ ಬಿ ಎಂ ಸತೀಶ್ ರವರು ಕೃತಜ್ಞತೆ ಸಲ್ಲಿಸಿದ್ದಾರೆ.