ದಾವಣಗೆರೆ ಸಿ.ಆರ್.ಸಿ ಕೇಂದ್ರದ ನಿರ್ದೇಶಕರಾಗಿ ಡಾ. ಉಮಾಶಂಕರ ಮೊಹಾಂತಿ
ದಾವಣಗೆರೆ : ದಾವಣಗೆರೆ ಸಿ.ಆರ್.ಸಿ ಕೇಂದ್ರದ ನಿರ್ದೇಶಕರಾಗಿ ಡಾ. ಉಮಾಶಂಕರ್ ಮೊಹಾಂತಿ ಮಾರ್ಚ್ 14 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ವಿಕಲಚೇತನ ವ್ಯಕ್ತಿಗಳ ಕೌಶಲ್ಯಾಭಿವೃದ್ದಿ, ಪುನರ್ವಸತಿ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಸಿ.ಆರ್.ಸಿ ಕೇಂದ್ರವು ವಿಕಲಚೇತನರಿಗೆ ನೆರವಾಗುವ ಅವರುಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ವಿಷಯಗಳಲ್ಲಿ ನೆರವಾಗುವುದರೊಂದಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರುಗಳಿಗೆ ತರಬೇತಿಯನ್ನು ನೀಡುತ್ತದೆ. ಈ ಕೇಂದ್ರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.