ಲೋಕಲ್ ಸುದ್ದಿ

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಗರದ ಹೆಮ್ಮೆಯ ಪುತ್ರಿ ಡಾ.ಮೃದುಲಾ

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಗರದ ಹೆಮ್ಮೆಯ ಪುತ್ರಿ ಡಾ.ಮೃದುಲಾ

ದಾವಣಗೆರೆ :  ನಗರದ ವಿದ್ಯಾನಗರದ ನಿವಾಸಿ ಗುಡಿ ಭದ್ರತಾ ಪಡೆಯ ,ಬಿ.ಎಸ್.ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದು, ಅಷ್ಟೇ ಅಲ್ಲ ಗ್ವಾಲಿಯರ್ ನ ಬಿ.ಎಸ್.ಎಫ್ ಅಕಾಡೆಮಿ ಯಲ್ಲಿ ಪಾಸಿಂಗ್ ಪೇರೆಡ್ ನಾ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಗಮನ ಸೇಳೆದು ಹೆಮ್ಮೆ ತಂದಿದ್ದಾರೆ.

ಕಳೆದ ವಾರ ಮಧ್ಯಪ್ರದೇಶದ ಗ್ವಾಲಿಯರ್ ನ ಬಿ ಎಸ್ ಎಫ್ ಅಕಾಡೆಮಿ ಟೆಕಾನ್ ಪುರ್ ನಲ್ಲಿ ನೆಡೆದ ಬಿ ಎಸ್ ಎಫ್ ಅಕಾಡೆಮಿ ಪಾಸಿಂಗ್ ಪೇರೆಡ್ ಆಯೋಜಿಸಲಾಗಿತ್ತು.ಆರು ತಿಂಗಳ ತರಬೇತಿ ನಂತರ ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ.

ಡಾಕ್ಟರ್ ಮೃದುಲ ರವರು ನಗರದ ಅನುಭವ ಮಂಟಪ ಶಾಲೆ ಏಳನೇ ತರಗತಿ ವಿದ್ಯಾರ್ಥಿನಿ, ನಂತರ ತಾಯಿ ಡಾ. ಶ್ರೀಮತಿ ವಿಜಯಶ್ರೀ ಲಿಂಗರಾಜ್ ರವರು ಮೊದಲು ಡಬ್ಲ್ಯೂ ಹೆಚ್ ಓ ದಲ್ಲಿ ನಂತರ ನೀತಿ ಆಯೋಗದಲ್ಲಿ ಕಾರ್ಯ ನಿರ್ವಹಿಸಲು ಬೆಂಗಳೂರು ತೆರಳಿದ ಹಿನ್ನೆಲೆಯಲ್ಲಿ ಕು. ಮೃದುಲ ಕೂಡ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವರ ಜೊತೆ ತೆರಳಿ ಕೋಲಾರದಲ್ಲಿ ವೈದ್ಯಕೀಯ ಶಿಕ್ಷಣ ಪದವಿ ಪಡೆದಿದ್ದರು.

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಗರದ ಹೆಮ್ಮೆಯ ಪುತ್ರಿ ಡಾ.ಮೃದುಲಾ ವೈದ್ಯಕೀಯ ಪದವಿ ಪಡೆದಿದ್ದರೂ ಮೃದುಲ ರವರು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸುವ ಬಯಕೆ ಇತ್ತು.ಈ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಯಲ್ಲಿ ನ ಅಸಿಸ್ಟೆಂಟ್ ಕಮಾಂಡೆಂಟ್ ಸೇವಾ ಪರೀಕ್ಷೆ ಬರೆದು ಉತ್ತೀರ್ಣ ರಾಗಿ ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆರು ತಿಂಗಳ ತರಬೇತಿ ನಂತರ ಗಡಿ ಭದ್ರತಾ ಪಡೆಗೇ ನೇಮಕ ಗೊಂಡಿದ್ದಾರೆ.

ಡಾಕ್ಟರ್ ಮೃದುಲ ಈಗಲೂ ದಾವಣಗೆರೆಯವರೆಂದೇ ಗುರುತಿಸಿಕೊಳ್ಳುವ ಅವರನ್ನು ಮೊದಲು ಪೇರೇಡ್ ಕಮಾಡೆಂರ್ ಆಗಿ ಆಹ್ವಾನ ನೀಡುವಾಗ ಅವರನ್ನು * ಪೇರೇಡ್ ಕಮಾಡೆಂರ್ ದಾವಣಗೆರೆ ಸೇ ಕರ್ನಾಟಕ ಕೀ ನಿವಾಸಿ ಬೇಟೀ…ಹೈ.ಎಂದೇ ಸಂಬೋಧಿಸಿಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿಲು ಬೇಕಾದಷ್ಟು ಅವಕಾಶಗಳಿವೆ.ಆದರೇ ಸೈನಿಕರಿಗೇ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಎಲ್ಲರಿಗೂ ಅವಕಾಶ ಸೀಗುವುದಿಲ್ಲ ಇದರ ಜೊತೆಗೆ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಯಲ್ಲಿ ಆಡಳಿತಾತ್ಮಕ ವಾಗಿಯೂ ಸಾಕಷ್ಟು ಜನರಿಗೆ ನೆರವಾಗಬಹುದು.ಈ ಎಲ್ಲಾ ಅವಕಾಶ ಬಿ ಎಸ್ ಎಫ್ ಮೂಲಕ ದೊರೆತಿರುವುದು ನನಗೆ ಹೆಮ್ಮೆ ಎನಿಸಿದೆಯೆಂದು ಡಾ.ಮೃದುಲ ಹೇಳಿದ್ದಾರೆ.

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಯಲ್ಲಿ ಇದ್ದರೂ ಯುದ್ಧದ ತರಬೇತಿ ನೀಡಲಾಗುತ್ತದೆ, ಅಧಿಕಾರಿಯಾಗಿದ್ದರೂ ಸಂಘರ್ಷ ದ ಸಮಯದಲ್ಲಿ ಇಂಥ ತರಬೇತಿ ಅವಶ್ಯಕತೆ ಇರಬೇಕಾದ್ದು ಅವಶ್ಯ, ಎನ್ನುವ ಅವರು ವೈದ್ಯಕೀಯ ಪದವಿ ಪಡೆದಿದ್ದರೂ ಸೇನೆ ಅಥವಾ ಪೋಲೀಸ್ ಇಲಾಖೆ ಸೇವೆ ಸಲ್ಲಿಸಿರುವ ಗುರಿ ಇತ್ತು ಈ ಗುರಿ ತಲುಪಿದ ಸಾರ್ಥಕತೆ ಭಾವ ಬಂದಿದೆ ವೈದ್ಯಕೀಯ ಹಿನ್ನೆಲೆಯಿಂದ ಬಂದವರು ಅಸಿಸ್ಟೆಂಟ್ ಕಮಾಂಡೆಂಟ್ ಆಗಿರುವವರ ಸಂಖ್ಯೆ ಕಡಿಮೆ ಇದು ಸೈನ್ಯದಲ್ಲಿ ಸೇವೆ ಸಲ್ಲಿಸುವ ಇನ್ನಷ್ಟು ಅವಕಾಶ ಹೆಚ್ಚಿಸಿದೆ ಎಂದು ಉತ್ಸಾಹ ದಿಂದ ಹೇಳಿದರು.

ಗುಡಿ ಭದ್ರತಾ ಪಡೆ ಸೆರಿದಂತೆ ಅಧಿಕಾರಿಗಳ ಹಂತದಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ ಆದರೆ ದಾವಣಗೆರೆ ಯಂತಹ ನಗರಗಳಲ್ಲಿ ಈ ಅವಕಾಶಗಳ ಮಾಹಿತಿ ಕೊರತೆಯಿದೆ, ನನಗೂ ಸಹ ಈ ಮಾಹಿತಿ ಬೆಂಗಳೂರಿಗೇ ಬಂದು ನಂತರವೇ ಈ ಮಾಹಿತಿ ತಿಳಿಯಿತು.ಜಿಲ್ಲೆ ಮತ್ತು ತಾಲೂಕು ಮಟ್ಟದ ಕಾಲೇಜು ಸಂಸ್ಥೆಗಳಲ್ಲಿ ಇಂಥ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಅರಿವು ಮೂಡಿಸುವ ಅಗತ್ಯವಿದೆ ಎಂದು ದಾವಣಗೆರೆ ಜಿಲ್ಲೆಯ ಹೆಮ್ಮೆಯ ಪುತ್ರಿ ನೂತನ ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಬಾ.ಮೃದುಲ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

ಬಿ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಗರದ ಹೆಮ್ಮೆಯ ಪುತ್ರಿ ಡಾ.ಮೃದುಲಾ

ಡಾ.ಮೃದುಲ ಎಂ ಲಿಂಗರಾಜ್ ರವರು ದಾವಣಗೆರೆ ಏ ಆರ್ ಜಿ ಕಾಲೇಜೀನ ನಿಕಟಪೂರ್ವ ಪ್ರಾಂಶುಪಾಲ ಪ್ರೊ ಬಿ.ದಿಳ್ಳೆಪ್ಪ ಹಾಗೂ ಸಮಾಜ ಸೇವಕೀ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ ದಿಳ್ಳೆಪ್ಪ ನವರ ಮೊಮ್ಮಗಳು, ಮೃದುಲ ಚಿಕ್ಕಪ್ಪ ಹರಿಹರ ತಾಲೂಕಿನ ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್, ತಂದೆ ಡಿ.ಎಂ.ಲಿಂಗರಾಜ್, ತಾಯಿ ಡಾಕ್ಟರ್ ವಿಜಯಶ್ರೀ ಲಿಂಗರಾಜ್ (ಎಂ.ಪಿ.ಹೆಚ್.ಸಿಂಗಾಪುರ.ಪಿ ಹೆಚ್ ಡಿ.ನೇಧರ್ ಲ್ಯಾಂಡ್) ಸಾರ್ವಜನಿಕ ಆರೋಗ್ಯ ತಜ್ಞೆ ಯಾಗಿದ್ದು ಇವರ ಏಕೈಕ ಪುತ್ರಿ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!