ಡಾ. ರಾಜಕುಮಾರ್ ಪುತ್ರಿ ಹಾಗೂ ಮೊಮ್ಮಗಳನ್ನು ತಮ್ಮ ಮನೆ ಕೆಲಸದವರಿಗೆ ಪರಿಚಯ ಮಾಡಿಸಿ ಸರಳತೆ ಮೆರೆದ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ; ಸಿನಿಮಾ ನಟರು ಎಂದರೆ ಎಂತವರಿಗೂ ಕುತೂಹಲ ಅದರಲ್ಲೂ ಡಾ ರಾಜಕುಮಾರ್ ಕುಟುಂಬ ಎಂದರೆ ಇನ್ನು ಹೇಳಬೇಕೇ????
ಇಂದು ಡಾ. ರಾಜಕುಮಾರ್ ರವರ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಹಾಗೂ ಮೊಮ್ಮಗಳು ಧಾನ್ಯ ರಾಮ್ ಕುಮಾರ್ ಹಾಗೂ ಸೂರಜ್ ರೇವಣ್ಣ ರವರು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ನಂತರ ಡಾ. ಪ್ರಭಾ ಮಲ್ಲಿಕಾರ್ಜುನ್ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ರಾಜಕುಮಾರ್ ಪುತ್ರಿ ಹಾಗೂ ಮೊಮ್ಮಗಳು ಬಂದಿದ್ದಾರೆಂದು ಕುತೂಹಲದಿಂದ ವೀಕ್ಷಿಸುತ್ತಿದ್ದ ತಮ್ಮ ಮನೆ ಕೆಲಸದವರನ್ನು ಕಂಡ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕರೆದು ಪೂರ್ಣಿಮಾ ಹಾಗೂ ಧಾನ್ಯ ರವರಿಗೆ ಪರಿಚಯ ಮಾಡಿಸಿ, ಅವರ ಜೊತೆ ತಾವು ಫೋಟೋ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.