ಸಕ್ರೆಬೈಲು ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ಕಾಡಾನೆ ದಾಳಿ.! ಆಸ್ಪತ್ರೆಗೆ ವೈಧ್ಯ ಶಿಫ್ಟ್

ಸಕ್ರೆಬೈಲು ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ಕಾಡಾನೆ ದಾಳಿ.! ಆಸ್ಪತ್ರೆಗೆ ವೈಧ್ಯ ಶಿಫ್ಟ್

ದಾವಣಗೆರೆ: ಚನ್ನಗಿರಿ ತಾಲ್ಲೂಕಿನಿಂದ ಕಾಡಾನೆ ಇದೀಗ ನ್ಯಾಮತಿ ತಾಲ್ಲೂಕಿನಲ್ಲಿ ಪತ್ತೆಯಾಗಿದೆ. ಆಪರೇಷನ್​ ಕಾಡಾನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಆನೆಯು ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ದಾಳಿ ನಡೆಸಿದೆ. ಇದೇ ಆನೆಯು ಮೂರು ದಿನಗಳ ಹಿಂದೆ ಅಪ್ತಾಪ್ತೆಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಹೇಗೆ ನಡೀತು ದಾಳಿ:
ಮೂರು ದಿನಗಳಿಂದ ಸೂಳೆಕೆರೆಯ ಸುತ್ತಮುತ್ತ ಕಾಡಾನೆಯನ್ನು ಸೆರೆಹಿಡಿಯಲು ಶಿವಮೊಗ್ಗ-ಭದ್ರಾವತಿ- ಚನ್ನಗಿರಿ-ಹೊನ್ನಾಳಿಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಇಂದು ಕೂಡ ಕಾರ್ಯಾಚರಣೆಯನ್ನು ಮುಂದುವರಿಸಲಾಗಿತ್ತು. ಆನೆಯ ಲದ್ದಿಯನ್ನು ಪತ್ತೆಮಾಡಿ ಅದರ ಸುಳಿವಿನ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆಯ ಇರುವಿಕೆಯನ್ನ ಪತ್ತೆಹಚ್ಚಲಾಗಿತ್ತು.
ಇನ್ನೇನು ಆನೆಯನ್ನು ಅರವಳಿಕೆ ಇಂಜೆಕ್ಷನ್​ ನೀಡಿ ಹಿಡಿಯಬೇಕು ಎನ್ನುವಷ್ಟರಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್​ರವರ ಮೇಲೆ ಆನೆ ದಾಳಿ ನಡೆಸಿದೆ.

ಅರವಳಿಕೆ ಚುಚ್ಚುಮದ್ದಿಗೂ ಬಗ್ಗದ ಕಾಡಾನೆ:
ಸೂಳೆಕೆರೆ ಬಳಿಯಿಂದ ನ್ಯಾಮತಿ ತಾಲ್ಲೂಕಿನ ಜೀನಳ್ಳಿ ಕಾಡಿನಲ್ಲಿ ಆನೆಯು ಇವತ್ತು ಬೆಳಗ್ಗೆ ಪತ್ತೆಯಾಗಿತ್ತು. ಅದನ್ನು ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂದುಕೊಂಡಂತೆ, ಸಹ ವೈದ್ಯರೊಬ್ಬರು ಆನೆಗೆ ಅರವಳಿಕೆ ಚುಚ್ಚುಮದ್ದನ್ನು ಡಾರ್ಟ್​ ಮಾಡಿದ್ದರು. ಆನೆಯು ಸಹ ಅರವಳಿಕೆ ಚುಚ್ಚುಮದ್ದಿನ ಪರಿಣಾಮವಾಗಿ ನೆಲಕ್ಕುರುಳಿತ್ತು. ಇದನ್ನ ಗಮನಿಸಿ ಸಿಬ್ಬಂದಿ ಆನೆಯ ಬಳಿಗೆ ಹೋಗಿದ್ದಾರೆ. ಆದರೆ ಇದಕ್ಕಿದ್ದಂತೆ ಎದ್ದ ಕಾಡಾನೆಯು ಇದ್ದಕ್ಕಿದ್ದಂತೆ ದಾಳಿಗೆ ಮುಂದಾಗಿದೆ. ಈ ವೇಳೆ ಅಲ್ಲಿಯೆ ಇದ್ದ ಡಾ.ವಿನಯ್​ ಓಡಲು ಆರಂಭಿಸಿದ್ದಾರೆ. ಆದರೆ, ಕಲ್ಲು ತಗುಲಿ ಎಡವಿ ಬಿದ್ದಿದ್ಧಾರೆ. ಅಷ್ಟರಲ್ಲಿ ಆನೆಯು ಅವರ ಮೇಲೆ ದಾಳಿ ನಡೆಸಿ, ಸೊಂಟದ ಮೇಲೆ ಕಾಲಿಟ್ಟು ತಿವಿಯಲು ಮುಂದಾಗಿದೆ. ತಕ್ಷಣವೇ ಸಿಬ್ಬಂದಿ ಗನ್ ನಿಂದ ಎರ್​ಫೈರ್ ಮಾಡಿ ಕೂಗಿದ್ದಾರೆ. ಆನೆ ವಿನಯರವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ.
ಇನ್ನೂ ಅರಣ್ಯ ಸಿಬ್ಬಂದಿ ವೈಧ್ಯ ವಿನಯ್ ಅವರನ್ನ ಇಲಾಖೆಯ ವಾಹನದಲ್ಲಿಯೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!