ಲೋಕಲ್ ಸುದ್ದಿ

ಕಾಲುವೆಗೆ ಕುಡಿಯುವ ನೀರು, ಅನಧಿಕೃತ ಪಂಪ್‍ಸೆಟ್ ತೆರವಿಗೆ ಸೂಚನೆ

ಕಾಲುವೆಗೆ ಕುಡಿಯುವ ನೀರು, ಅನಧಿಕೃತ ಪಂಪ್ಸೆಟ್ ತೆರವಿಗೆ ಸೂಚನೆ

ದಾವಣಗೆರೆ : ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಪ್ರಸ್ತುತ ಬೇಸಿಗೆ ಹಂಗಾಮಿಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು, ಕಾಲುವೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್  ತೆರವುಗೊಳಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.

ಬೆಸ್ಕಾಂ, ಪೋಲೀಸ್, ನೀರಾವರಿ, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳ ಸಹಯೋಗದಲ್ಲಿ ಏಪ್ರಿಲ್ 17 ರಂದು ತೆರವುಗೊಳಿಸಿವ ಕಾರ್ಯಚರಣೆ ಕೈಗೊಂಡಿದ್ದು, ದಾವಣಗೆರೆ ಮತ್ತು ಮಾಯಕೊಂಡ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಶಾಖಾ ಕಾಲುವೆ 0.30 ಕಿ.ಮೀ ನಿಂದ 56 ಕಿ.ಮೀವರೆಗೆ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸದಿದ್ದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ 1965 ರನ್ವಯ  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!