ವಿಶ್ವ ಕ್ಷಯರೋಗ ದಿನದ ಪ್ರಯುಕ್ತ ಸೈಕಲ್ ಜಾಥಕ್ಕೆ ಚಾಲನೆ
ದಾವಣಗೆರೆ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನ-ಮಾರ್ಚ್ 24 2022 ರ ಪ್ರಯುಕ್ತ ಗುರುವಾರ ನಗರದ ನಿಜಲಿಂಗಪ್ಪ ಬಡವಾಣೆಯಲ್ಲಿರುವ ಗಡಿಯಾರ ಕಂಬದ ವೃತ್ತದಲ್ಲಿ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಚನ್ನಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಿಜಲಿಂಗಪ್ಪ ಬಡಾವಣೆಯಿಂದ ಶಿವಾಲಿ ಟಾಕೀಸ್ ರೋಡ್, ಹೊಂಡದ ಸರ್ಕಲ್, ದೊಡ್ಡ ಪೇಟೆ ಮಾರ್ಗವಾಗಿ ಸಿ.ಜಿ ಆಸ್ಪತ್ರೆಯವರೆಗೆ ಸೈಕಲ್ ಜಾಥಾ ಜರುಗಿತು.
ಇದೆ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲ್ಲಾಸ್ಪತ್ರೆ ಅಧೀಕ್ಷಕ ಎಸ್.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ ನಾಯ್ಕ್, ಜಿಲ್ಲಾ ಮಲೇರಿಯಾಧಿಕಾರಿ ಡಾ.ನಟರಾಜ್ ಕೆ, ಡಿಹೆಚ್ಒ ಡಾ.ನಾಗರಾಜ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಮುರುಳೀಧರ್ ಪಿ.ಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್ ಗೌಡ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ಮತ್ತು ಎನ್.ಟಿ.ಇ.ಪಿ ತಂಡ ಸೇರಿದಂತೆ ಇತರರು ಭಾಗವಹಿಸಿದ್ದರು.