ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಡಿ.ಎಸ್.ಎಸ್ ಮನವಿ.
ದಾವಣಗೆರೆ: ಜಿಎಂಐಟಿ ಕಾಲೇಜಿನ ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ದಲಿತ ಸಮುದಾಯಕ್ಕೆ ಸೇರಿದ ತನ್ನ ಸಂಗಾತಿಯನ್ನು ಸುಟ್ಟು ಕೊಂದಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮೃತರನ್ನು 23 ವರ್ಷದ ದಾನೇಶ್ವರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ಸಹೋದರಿ ತೇಜಸ್ವಿನಿ ಶಿವಕುಮಾರ್ ಚಂದ್ರಶೇಖರ್, ಹಿರೇಹಾಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಪೊಲೀಸರ ಪ್ರಕಾರ ಆರೋಪಿಗಳು ಮತ್ತು ಸಂತ್ರಸ್ಥೆ ವಿಜಯಪುರದ ಒಂದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್ಗೆ ದಾಖಲಾಗಿದ್ದರು. ನಂತರ ಅವರು ಸಂಬಂಧವನ್ನು ಪ್ರಾರಂಭಿಸಿದರು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದರು, ಮತ್ತು ಸಂಬಂಧವನ್ನು ಮುಂದುವರೆಸಿದರು. ಆರೋಪಿಗಳು, ದಾನೇಶ್ವರಿಗೆ ಮದುವೆ ಭರವಸೆ ನೀಡಿದ್ದರು ಎಂದು ಸಂತ್ರಸ್ಥೆಯ ಸಹೋದರಿ ಮಾಹಿತಿ ನೀಡಿದ್ದಾರೆ. ಸಂತ್ರಸ್ಥೆ ಮದುವೆ ವಿಷಯವಾಗಿ ಚರ್ಚಿಸಿದಾಗ ಆರೋಪಿಯು ತನ್ನ ಪೋಷಕರ ಒಪ್ಪಿಗೆ ಪಡೆದು ತನ್ನ ಬಳಿಗೆ ಬರುವುದಾಗಿ ಹೇಳಿದ್ದಾನೆ.
ಈ ಪ್ರಕರಣದ ಅಡಿಯಲ್ಲಿ ದಾನೇಶ್ವರಿ ಬೇರೆ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ಮದುವೆ ಆಗುವುದಿಲ್ಲವೆಂದು ಆರೋಪಿಗಳು ಪ್ರತ್ಯೇಕ ಸ್ಥಳಕ್ಕೆ ಆಕೆಯನ್ನು ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಸಂತ್ರಸ್ಥೆಯ ಆಸತ್ರೆಗೆ ಕರೆದೊಯ್ದಿದ್ದಾರೆ. ಈ ಪ್ರಕರಣವು ಮಾರ್ಚ್ 15ರಂದು ಸಂತ್ರಸ್ಥೆಯು ಗಾಯಗೊಂಡಿದ್ದಳು. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ದಲಿತರ ಮತ್ತು ಮಹಿಳೆಯರ ಮೇಲೆ ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಶೀಘ್ರವೇ ಇಂತಹ ಕೃತ್ಯಗಳನ್ನು ನಿಲ್ಲಿಸಲು ಕಠಿಣ ಕಾನೂನು ಸುವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಶೀಘ್ರವೇ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಕರ್ನಾಟಕದಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಹೋರಾತ್ರಿ ಧರಣೆ ನಡೆಸಲು ಸಿದ್ಧವಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಮಹಿಳಾ ಒಕ್ಕೂಟದ ವಿಜಯಮ್ಮ, ಬಾತಿ ಸಿದ್ದೇಶ್, ನಿಂಗಪ್ಪ ಬನ್ನಿಹಟ್ಟಿ, ಲಿಂಗರಾಜ್ ಗಾಂಧಿನಗರ, ಜಿಗಳಿ ಹಾಲೇಶ್, ಪರಮೇಶ್ ಪುರದಾಳ್, ಪ್ರದೀಪ್, ಅಣಜಿ ಹನುಮಂತ, ಮಂಜು ಕುಂದವಾಡನ ಹಾಗೂ ಇತರರು ಹಾಜರಿದ್ದರು.