ದುಡಾ ಕಚೇರಿಯಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿಸಿದ ಪ್ರಕರಣ: ಸ್ಪಷ್ಟನೆ ನೀಡಿದ ದುಡಾ ಎಇಇ

IMG-20210817-WA0022

 

ದಾವಣಗೆರೆ: ದೂಡಾದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಾವು ಆ ಸ್ಥಳದಲ್ಲಿಯೇ ಇರಲಿಲ್ಲ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆ.ಹೆಚ್. ಶ್ರೀಕರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ದೂಡಾದಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿಸಿ ದೂಡಾ ಅಧ್ಯಕ್ಷರು, ಆಯುಕ್ತರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು, ಇದು ಮಾನಹಾನಿಗೆ ಕಾರಣವಾಗಿದೆ. ಆದರೆ, ನಾನು ಬೇರೆ ಕಾರ್ಯ ನಿಮಿತ್ತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ‌ ಎಂದು ಅವರು ತಿಳಿಸಿದ್ದಾರೆ.

ದುಡಾ ಆಯುಕ್ತರಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀಕಾರ್ ಬರೆದ ಪತ್ರದ ಸಾರಾಂಶ

” ಮಾಧ್ಯಮಗಳ ಸುದ್ದಿಯಲ್ಲಿನ ಅಂಶ ಪರಿಸೀಲಿಸಲಾಗಿ ನನಗೆ ಸಂಬಂಧಪಟ್ಟ ಕರ್ತವ್ಯವಲ್ಲದ ವಿಷಯದ ಬಗ್ಗೆ ಸುದ್ದಿ ಪ್ರಕಟಗೊಂಡಿರುವುದು ನನ್ನ ಮಾನಹಾನಿಗೆ ಕಾರಣವಾಗಿರುತ್ತದೆ. ಅಲ್ಲದೇ ನಾನು ಹಾಗೂ ನನ್ನ ತಾಂತ್ರಿಕ ಸಿಬ್ಬಂದಿಗಳು ಶ್ರೀ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರವರ ಕಾರ್ಯಕ್ರಮದಲ್ಲಿ ನಿಯೋಜಿಸಿಕೊಂಡು ಕಾರ್ಯ ನಿರ್ವಹಣೆ ಕೈಗೊಂಡಿರುತ್ತೇನೆ. ಈ ಬಗ್ಗೆ ನನ್ನ ದೂರವಾಣಿಯ ಲೋಕೇಶನ್ ಸಹ ತನಿಖೆ ಮಾಡಿಸಲು ಕೋರುತ್ತೇನೆ. ಅಲ್ಲದೇ ಧ್ವಜಾರೋಹಣಾ ಕಾರ್ಯವನ್ನು ಕಛೇರಿಯ ಇತರೇ ಸಿಬ್ಬಂದಿ/ಅಧಿಕಾರಿಗಳಿಗೆ ಸಂಬಂಧಿಸಿದಾಗಿರುತ್ತದೆ. ಅದರಂತೆ ಸದರಿ ಸಿಬ್ಬಂದಿ/ಅಧಿಕಾರಿಗಳ ಇತರೇ ಸಿಬ್ಬಂದಿ/ಅಧಿಕಾರಿಗಳು ಧ್ವಜ ನಿರ್ವಹಣೆ ಕಾರ್ಯ ಮಾಡಿದ್ದು, ಅವರುಗಳ ಮಾಡಿದ ಅಜಾರಾಗತೆಯಿಂದ ಇದು ಕಛೇರಿಗೆ ಕುಂದು ಉಂಟಾಗಿರುತ್ತದೆ. ಅಲ್ಲದೇ ನನ್ನ ಕರ್ತವ್ಯದಲ್ಲಿ ನಾನು ಮತ್ತು ನನ್ನ ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸದೇ ಇರುವುದರಿಂದ ಈ ಅಜಾರಾಗತ ಕಾರಣರಾದ ಹಾಗೂ ಕರ್ತವ್ಯ ಲೋಪ ಏಸಗಿದ ಸಿಬ್ಬಂದಿ/ಅಧಿಕಾರಿಗಳ ಬಗ್ಗೆ ಸೂಕ್ತ ತನಿಖೆ ಮಾಡಿಸಲು ತಮ್ಮಲ್ಲಿ ಕೋರಿದೆ.”

ಎಂದು ದುಡಾ ಆಯುಕ್ತರಿಗೆ‌ ಬರೆದ ಪತ್ರದಲ್ಲಿ ಎಇಇ ಕೋರಿದ್ದಾರೆ. ಹಾಗೂ ಪ್ರತಿಗಳನ್ನು ಜಿಲ್ಲಾಧಿಕಾರಿಗಳಿಗೂ ಕೂಡ ಕಳಿಸಲಾಗಿದೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!