ಪೂರ್ವ ವಲಯ ಐಜಿಪಿ ವರ್ಗಾವಣೆ: ಪೊಲೀಸ್ ಅಧಿಕಾರಿಗಳ ಮುಖದಲ್ಲಿ ಸಂತಸ.! ಇನ್ಮುಂದೆ ಅಕ್ರಮ ದಂಧೆಗಳಿಗೆ ಬಿಳುತ್ತಾ ಬ್ರೇಕ್.!?

igp eastern range ravi s transfer

 

ದಾವಣಗೆರೆ: ಎರಡು ವರ್ಷಗಳಿಂದ Eastern Range ಪೂರ್ವ ವಲಯ ಐಜಿಪಿ ಆಗಿದ್ದ ‘ರವಿ ಎಸ್ ಐಪಿಎಸ್’ Ravi S IPS ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (ಕೆ ಎಸ್ ಆರ್ ಪಿ KSRP IGP) ಐಜಿಪಿ ಯಾಗಿ ವರ್ಗಾವಣೆ ಹೊಂದಿದ್ದಾರೆ. ನೂತನ ವರ್ಷ 2022 ರ ಮುನ್ನಾ ದಿನ ಅಂದ್ರೆ 31-12-2021 ರಾತ್ರಿ ಕರ್ನಾಟಕ ಸರ್ಕಾರ ಬರೋಬ್ಬರಿ 50 ಕ್ಕೂ ಹೆಚ್ಚು ಹಿರಿಯ ಐಪಿಎಸ್ ಅಧಿಕಾರಿಗಳನ್ನ IPS OFFICERS TRANSFER ವರ್ಗಾವಣೆ ಮಾಡಿತ್ತು. ಅವರಲ್ಲಿ ರವಿ ಎಸ್ ಕೂಡ ಒಬ್ಬರು. ಈ ಹಿಂದೆ ಕರ್ನಾಟಕ ಆಂತರಿಕ ಭದ್ರೆತೆಯ ಐಜಿಪಿಯಾಗಿ ಅದರ ಜೊತೆಗೆ ಹೆಚ್ಚುವರಿಯಾಗಿ ನಾಲ್ಕು ಜಿಲ್ಲೆಗೊಳಗೊಂಡ ಪೂರ್ವ ವಲಯದ ಐಜಿಪಿಯಾಗಿ ಕಾರ್ಯ ನಿರ್ವಹಿಸಿದ್ದು ರಾಜ್ಯದಲ್ಲಿ ಇತಿಹಾಸವೇ ಸರಿ ಎನ್ನಲಾಗಿದೆ.

ಜನವರಿ 1 ರಂದು ದಾವಣಗೆರೆ ನಗರದಲ್ಲಿರುವ ಪೂರ್ವ ವಲಯ ಐಜಿಪಿ ಕಚೇರಿಯಲ್ಲಿ ರವೊ ಎಸ್ ಅವರಿಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಯ ಎಸ್ ಪಿ ಗಳು SP ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಬಿಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿದ್ದರು. ಈ ವೇಳೆ ಹಲವು ಅಧಿಕಾರಿಗಳು ಎಂದಿಗಿಂತಲೂ ಜಾಸ್ತಿಯಾಗಿ ಸಂತಸಪಟ್ಟಿದ್ದರು ಎನ್ನಬಹುದು. ಯಾಕೆಂದರೆ ಎಲ್ಲರೂ ಹೇಳೊದು ಒಂದೇ ಒಒಡಿ ಇರುವ ಅಧಿಕಾರಿ ಕನಿಷ್ಠ ಅಂದ್ರೆ 4-6 ತಿಂಗಳು ಹೆಚ್ಚುವರಿಯಾಗಿ ಕೆಲಸ ಮಾಡ್ತಾರೆ, ಆದ್ರೆ ಇವರನ್ನ ಯಾಕೆ ಸರ್ಕಾರ ಇಷ್ಟೊಂದು ದಿನ ಮುಂದುವರಿಸಿಕೊಂಡು ಬಂದಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿತ್ತು.!

 

 

ಆಂತರಿಕ ಭದ್ರತೆಯ ISD ಉನ್ನತ ಅತಿಸೂಕ್ಷ್ಮ ಜವಾಬ್ದಾರಿ ಜೊತೆಗೆ ಪೂರ್ವ ವಲಯದಲ್ಲಿ ಫಲವತ್ತಾದ ಪ್ರಸಾದ ಸಿಗುವ ನಾಲ್ಕು ಜಿಲ್ಲೆಗಳಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಇದೀಗ ಕೆ ಎಸ್ ಆರ್ ಪಿ ಐಜಿಪಿಯಾಗಿ ಕಾರ್ಯ ನಿರ್ವಹಣೆಗೆ ತೆರಳಲು ರಾಜ್ಯದ ಗೃಹ ಮಂತ್ರಿಗಳ ಖಡಕ್ ನಿರ್ಧಾರಕ್ಕೆ ಎಲ್ಲರೂ ತಲೆಭಾಗಬೇಕಾಗಿದೆ, ಒಟ್ಟಿನಲ್ಲಿ ರವಿ ಎಸ್ ಅವರ ಕಾರ್ಯಗಳು ನಾಲ್ಕೂ ಜಿಲ್ಲೆಯ ಜನರಲ್ಲಿ ಮೂಡಿರುವ ಭಾವನೆಗಳು ಭಾರಿ ರೋಚಕವೇ ಸರಿ ಎನ್ನಬಹುದು.

 

“ವರ್ಗಾವಣೆ ಸುತ್ತಾಮುತ್ತಾ ಒಂದು ಸಣ್ಣ ನೋಟ”

ಕೊವಿಡ್ ಮೊದಲನೇ ಹಾಗೂ ಎರಡನೇ ಅಲೆ ಭಾರತ ದೇಶವನ್ನೇ ಬೆಚ್ಚಿಬಿಳಿಸಿತ್ತು, ಕೊರೊನಾ ಸೊಂಕು ತಡೆಗಟ್ಟಲು ಕರ್ನಾಟಕ ಸರ್ಕಾರದಿಂದ ಕಠಿಣ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಆದ್ರೆ ಕೆಲ ಅಕ್ರಮಗಳಿಗೆ ಲಾಕ್ ಡೌನ್ ಅಡ್ಡಿಯಾಗಿರಲಿಲ್ಲ ಎಂಬುದಿ ಸತ್ಯವಾಗಿತ್ತು. ಎಂತದೇ ಪರಿಸ್ಥಿತಿ ಬರಲಿ ಲಾಭ ಮಾಡಿಕೊಳ್ಳಲು ದುರುಳರಿಗೆ ಇದೊಂದು ಸುಸಮಯವಾಗಿತ್ತು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವವರೇ ದುರುಳರ ಜೊತೆ ಶಾಮೀಲಾಗಿದ್ದರು ಎನ್ನಲಾಗುತ್ತಿತ್ತು,

ಹೌದು, ರಾಜ್ಯದ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಅದರಲ್ಲೂ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು,ಗುತ್ತಲ, ಶಿವಮೊಗ್ಗದಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇತ್ತು, ಲಾಕ್ ಡೌನ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಪ್ರತಿ ದಿನ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿತ್ತು, ಈ ಹಿಂದೆ ತುಂಗಭದ್ರ ನದಿಯ ಮಧ್ಯ ಭಾಗದಲ್ಲಿ ಮೋಟಾರ್ ಭೋಟ್, ತೆಪ್ಪಗಳಲ್ಲಿ ಮರಳನ್ನು ತೆಗೆಯಲಾಗುತ್ತಿತ್ತು. ಕೆಲವರ ವಿರೋಧದಿಂದ ಅದನ್ನ ಸ್ವಲ್ಪ ಮಟ್ಟಿಗೆ ನಿಲ್ಲಿಸಿದಂತೆ ಮಾಡಲಾಗಿತ್ತು, ಅದರೂ ಕೆಲವೆಡೆ ಮಧ್ಯ ರಾತ್ರಿ ಇನ್ನೂ ಕೂಡ ಕೆಲವರು ಪ್ರಸಾದಪಡೆದು ಅಕ್ರಮಕ್ಕೆ ಸಾಥ್ ನೀಡಿ ನಾನು ಸಾಚಾ ಎನ್ನಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ಮಧ್ಯೆ ಮಟ್ಕಾ ಎಂಬ ಇನ್ನೊಂದು ಅಕ್ರಮ ಸಕತ್ತಾಗಿ ಬೇರೂರಿ ಬಿಟ್ಟಿತ್ತು, ಕೆಲವರಂತು ಗಲ್ಲಿ ಗಲ್ಲಿಯಲ್ಲಿ ಎಗ್ಗಿಲ್ಲದೆ ಚೀಟಿ ಬರೆದುಕೊಟ್ರೆ, ಇನ್ನೊಂದೆಡೆ ಇಟ್ಟಿಗೆ ಬಟ್ಟಿಗಳ ಒಂದೋಂದು ಮನೆಯಲ್ಲಿ 3-4 ಟೇಬಲ್ ಹಾಕಿಕೊಂಡು ಮಟ್ಕಾ ಚೀಟಿ ಬರೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಕ್ಯಾರೆ ಎನ್ನುತ್ತಿರಲಿಲ್ಲ.

ತುಂಗಭದ್ರೆಯ ಗರ್ಭದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದ್ದರು ಸರ್ಕಾರಿ ಸೈನ್ಯದಿಂದ ಬರಖಾಸ್ತು ಮಾಡೋಕೆ ಆಗ್ತಿಲ್ಲ ಎಂಬ ಗೋಳಂತು ನದಿತಟದ ನಾಗರೀಕರ ಅಳಲು ಹೇಳಲಾಗದಂತಾಗಿತ್ತು ಎನ್ನಲಾಗಿದೆ.

ಅಕ್ರಮ ಮರಳುಗಾರಿಕೆ ವಿರುದ್ದ ಕೈ-ಬಿಜೆಪಿ, ಹಾಲಿ, ಮಾಜಿ ಶಾಸಕರಿಂದ ಹಲವು ಭಾರಿ ಅಸಮಾಧಾನದ ಹೋಗೆಯಾಡಿದ್ದರೂ ವ್ಯವಸ್ಥೆಯ ಜೊತೆಗೆ ಎಲ್ಲರೂ ಹೊಂದಿಕೊಂಡಿರುವ ಬಗ್ಗೆ ಅನೇಕ ಸಲ ಚರ್ಚೆಗಳು ನಡೆದಂತಹ ಉದಾಹರಣೆಗಳು ಇವೆ.

ನಾಲ್ಕೂ ಜಿಲ್ಲೆಯಲ್ಲಿ ” ಭಾಯಿ” ಹಾಗೂ ” ಐ ಎಸ್ ” ಎಂಬ ಹೆಸರಿನ ಕೋಡ್ ವರ್ಡ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು.!

ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದ ನಾಗರಿಕ ಶಕ್ತಿ, ಅಪರಾಧ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ, ಮತ್ತು ಸಾರ್ವಜನಿಕ ಆದೇಶದ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರು ‘ಭಾಯಿ’ ‘ಐ ಎಸ್’ ಎಂಬ ಕೋಡ್ ವರ್ಡ್ ಹೆಸರಿಗೆ ಹೆದರಿ‌ ಅವನ ಎದುರು ಜಿಹುಜೂರ್ ಎಂಬಂತೆ ಇದ್ದರು ಎನ್ನಲಾಗುತ್ತದೆ, ಈ ಸೈನ್ಯದಿಂದ ಅಧಿಕಾರಶಾಹಿಗಳು ಯಾವ ರೀತಿ ಮಂಡಿಯೂರಿದ್ದರು ಎಂಬ ಬಗ್ಗೆ ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದದ್ದು ಜಗಜ್ಜಾಹಿರಾಗಿತ್ತು.

 

ಅಕ್ರಮ ಮರಳುಗಾರಿಕೆ ನಡೆಸಲು ಉತ್ತರ ಪ್ರದೇಶದ ಕಾರ್ಮಿಕರನ್ನ ಬಳಸಿಕೊಂಡು, ಅಕ್ರಮ ತಡೆಯುವ ಸೈನ್ಯ ಕೊರೊನಾ ನೆನಪಲ್ಲಿ ಮುಳುಗಿದೆ ಅಂತಾ ಸಾರ್ವಜನಿಕವಾಗಿ ಇನ್ನು ಕೇಳಿಬರುತ್ತಿದೆ ಎನ್ನಲಾಗಿದೆ.

ಒಟ್ಟಾರೆ ರಾಜ್ಯಾದ್ಯಂತ ಪೂರ್ವ ವಲಯ ಅತಿಹೆಚ್ಚು ಸುದ್ದಿಯಾಗಿದ್ದು, ಮುಂದೆಯೂ ಈಗಿನ ರೀತಿ ಯಲ್ಲಿ ಇರದೇ ಇದ್ರೆ ಸಾಕಪ್ಪಾ ಅಂತಾರೆ..!!!

Leave a Reply

Your email address will not be published. Required fields are marked *

error: Content is protected !!