ER Dysp Cpi: ಪೂರ್ವ ವಲಯ ಐಜಿಪಿ ಕಚೇರಿಯ ಡಿ ವೈ ಎಸ್ ಪಿ ಹಾಗೂ ಸಿ ಪಿ ಐ ವರ್ಗಾವಣೆ | ಪೊಲೀಸ್ ಇಲಾಖೆಯಲ್ಲಿ ಗುಸು ಗುಸು – ಪಿಸು ಪಿಸು.!

eastern range igp office davangere

 

ದಾವಣಗೆರೆ: ಕಳೆದ ಎರಡು ವರ್ಷಗಳಿಂದ ದಾವಣಗೆರೆ ಕೇಂದ್ರವಾಗಿರುವ ಪೂರ್ವ ವಲಯ ಐಜಿಪಿ ಕಚೇರಿಯ ತಂಡ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು, ಅಕ್ರಮ ಚಟುವಟಿಕೆ ನಡೆಸುವವರಿಗೆ ಹಾಗೂ ವಲಯದ ನಾಲ್ಕು ಜಿಲ್ಲೆಯ ಪೊಲೀಸರಿಗೂ ಐಜಿಪಿ ಸ್ಕ್ವಾಡ್ ಅಂದ್ರೆ ಒಂದು ತರಹದ ಭಯವಿತ್ತು. ಅದರಲ್ಲೂ ಕಲ್ಲು ಕ್ವಾರಿಗಳಲ್ಲಿ ಅಕ್ರಮವಾಗಿ ಸ್ಫೋಟಕ ಬಳಕೆ ತಡೆಯುವಲ್ಲಿ, ಅಕ್ರಮ ಮರಳುಗಾರಿಕೆ, ಜೂಜಾಟ, ಮಟ್ಕಾ ದಂದೆಗಳಿಗೆ ಬಾಹ್ಯ ರೀತಿಯಲ್ಲಿ ಬೆಂಬಲದ ಜೊತೆಗೇ ಕೆಲವೆಡೆ ಕಡಿವಾಣ ಕೂಡ ಬಿದ್ದಿತ್ತು. ಏನೆ ಇದ್ದರೂ ಕೆಲವೆಡೆ ಯಾರಿಗೂ ಕೇರ್ ಮಾಡದೇ ಹಲವು ಅಕ್ರಮ ಚಟುವಟಿಕೆಗಳು ಮಾಮೂಲಿಯಾಗಿ ನಡೆಯುತ್ತಿತ್ತು, ಆದರೂ ಕೆಲ ದಂಧೆಕೋರರಿಗೆ ಭಯ ಹುಟ್ಟಿಸಿತ್ತು ಈ ಐಜಿಪಿ ತಂಡ.

ಐಜಿಪಿ ತಂಡದಲ್ಲಿ ಪ್ರಮುಖವಾಗಿ ಡಿ ವೈ ಎಸ್ ಪಿ ತಿರುಮಲೇಶ್ ಹಾಗೂ ಸಿ ಪಿ ಐ ಡಾ|| ಶಂಕರ್ ಅವರನ್ನ ಸರ್ಕಾರ ವರ್ಗಾವಣೆಗೊಳಿಸಿದೆ. ಒಂದು ವಾರದ ಹಿಂದೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ದಾವಣಗೆರೆ ಐ ಜಿ ಪಿ ಕೇಂದ್ರ ಕಚೇರಿಯಿಂದ ಬಿಡುಗಡೆಗೊಳಿಸಲಾಗಿದೆ. ಡಿ ವೈ ಎಸ್ ಪಿ ಯವರನ್ನ ಬೆಂಗಳೂರು ಸಿ ಓ ಡಿಗೆ ಹಾಗೂ ಸಿ ಪಿ ಐ ಅವರನ್ನ ಕೋಸ್ಟಲ್ ಗೆ ವರ್ಗಾವಣೆ ಮಾಡಲಾಗಿದೆಯಂತೆ. ಐಜಿಪಿ ಕಚೇರಿಗೆ ನೂತನವಾಗಿ ಭರತ್ ಎಂಬುವವರು ಡಿ ವೈ ಎಸ್ ಪಿ ಹಾಗೂ ಗುಡ್ಡಪ್ಪ ಎಂಬುವವರು ಸಿ ಪಿ ಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ,ಹಾವೇರಿ ಸೇರಿದಂತೆ ನಾಲ್ಕೂ ಜಿಲ್ಲೆಗಳನ್ನ ಒಳಗೊಂಡಿದೆ ಈ ಪೂರ್ವ ವಲಯ ಐಜಿಪಿ ಕಚೇರಿ. ಹಿರಿಯ ಅಧಿಕಾರಿಗಳ ವರ್ಗಾವಣೆಯಿಂದ ಪೊಲೀಸ್ ಇಲಾಖೆ ಸೇರಿದಂತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದವರ ಬಾಯಲ್ಲಿ ಯಾಕೋ ಗುಸು ಗುಸು ಪಿಸು ಪಿಸು ಕೇಳಿ ಬರುತ್ತಿರುವುದು ಯಾಕೆ ಅಂತಾ ಗೊತ್ತಿಲ್ಲದ ಸಂಗತಿಯಾಗಿದೆ.!

 

Leave a Reply

Your email address will not be published. Required fields are marked *

error: Content is protected !!