ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲೋತ್ಸವ ಕಾರ್ಯಕ್ರಮಗಳಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಆಹ್ವಾನ

ದಾವಣಗೆರೆ : ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲೋತ್ಸವ ಕಾರ್ಯಕ್ರಮಗಳಡಿ ವಿವಿಧ ಸ್ಪರ್ಧೆಗಳಿಗೆ ಆಸಕ್ತ 09 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
ಕಲೋತ್ಸವ ಶಾಲಾ ಶಿಕ್ಷಣದ ಒಂದು ಉಪಕ್ರಮ, ಶಿಕ್ಷಣದಲ್ಲಿ ಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಮತ್ತು ಅದರ ವೈವಿದ್ಯತೆಯ ಅರಿವನ್ನು ಶಾಲಾ ಮಕ್ಕಳಲ್ಲಿ ಮೂಡಿಸಲು, ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಗುರುತಿಸಿ, ಪ್ರದರ್ಶಿಸಲು ಶಾಲಾ ಶಿಕ್ಷಣ ಸಚಿವಾಲಯ(ಎಂಒಇ) ಭಾರತ ಸರ್ಕಾರ 2015ರಲ್ಲಿ ಪ್ರಾರಂಭಿಸಿದ ಕಲೋತ್ಸವ ಕಾರ್ಯಕ್ರಮವನ್ನು ಪ್ರಸ್ತುತ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಆನ್‍ಲೈನ್ ಮೂಲಕ ಶಾಲಾ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಚರಿಸಲು ಅವಕಾಶ ಮಾಡಿಕೊಟ್ಟಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‍ಇಪಿ) ಶಿಕ್ಷಣದ ಮೂಲಕ ಕಲೆ ಮತ್ತು ಸಂಸ್ಕøತಿಯ ಪ್ರಚಾರವನ್ನು ಒತ್ತಿ ಹೇಳುತ್ತದೆ. ಪ್ರಸ್ತುತ ವರ್ಷದ ಕಲಾ ಪ್ರಕಾರಗಳು ಈ ಕೆಳಗಿನಂತಿದೆ.
ಗಾಯನ ಸಂಗೀತ – ಶಾಸ್ತ್ರೀಯ, ಗಾಯನ ಸಂಗೀತ – ಸಾಂಪ್ರದಾಯಿಕ ಜಾನಪದ, ವಾದ್ಯ ಸಂಗೀತ – ಶಾಸ್ತ್ರೀಯ, ವಾದ್ಯ ಸಂಗೀತ – ಸಾಂಪ್ರದಾಯಕ ಜಾನಪದ,ನೃತ್ಯ – ಶಾಸ್ತ್ರೀಯ, ನೃತ್ಯ – ಸಾಂಪ್ರದಾಯಕ ಜಾನಪದ, ದೃಶ್ಯಕಲೆಗಳು – ವಿಷುಯಲ್‍ಆಟ್ರ್ಸ್ (2ಆಯಾಮ), ದೃಶ್ಯಕಲೆಗಳು – ವಿಷುಯಲ್‍ಆಟ್ರ್ಸ್ (3ಆಯಾಮ), ಸ್ಥಳೀಯ ಆಟಿಕೆಗಳು ಮತ್ತು ಆಟಗಳು
ಸ್ಪರ್ಧೆಯಲ್ಲಿ ಯಾವುದೇ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬೇಕು.
ಕಾರ್ಯಕ್ರಮ ನಡೆಸುವ ಹಂತಗಳ ವಿವರ ಇಂತಿದೆ. ಶಾಲಾ ಹಂತವು ಕಲೋತ್ಸವದ ಪ್ರಥಮ ಹಂತವಾಗಿದ್ದು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲೋತ್ಸವದ ಮಾರ್ಗಸೂಚಿಯಂತೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳ ಕಲಾ ಪ್ರಕಾರವನ್ನು (ಪ್ರದರ್ಶನ ಮತ್ತು ರಚನೆ) 5 ನಿಮಿಷಗಳಿಗೆ ಮೀರದಂತೆ ಚಿತ್ರೀಕರಣ ಮಾಡಿ ಆನ್‍ಲೈನ್ ಮೂಲಕ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಹಾಗೂ viಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್ ಲಿಂಕ್‍ನಲ್ಲಿ ವಿದ್ಯಾರ್ಥಿಗಳು “ಕಲೋತ್ಸವ” ಕಾರ್ಯಕ್ರಮ ಸ್ಪರ್ಧೆಯ ನಿಯಮಗಳನ್ನು ಓದಿಕೊಂಡು, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಸ್ಯಾಟ್ಸ್ ಗುರುತಿನ ಸಂಖ್ಯೆಯನ್ನು ನಮೂದಿಸಿ, ತಮ್ಮ ಕಲಾ ಪ್ರಕಾರದ ಪ್ರಸ್ತುತಿಯನ್ನು (ವಿಡಿಯೋ ಫೈಲ್ಸ್‍ನ್ನು ಎಂ.ಪಿ.-4 ಫಾಮ್ರ್ಯಾಟ್ ತಂತ್ರಾಂಶದಲ್ಲಿ ತಂತ್ರಾಂಶದಲ್ಲಿ ನ. 10 ರೊಳಗೆ ಅಪ್‍ಲೋಡ್ ಮಾಡಬೇಕು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
ಕಲೋತ್ಸವದಲ್ಲಿ ಜಿಲ್ಲಾ ಹಂತವು ದ್ವಿತೀಯ ಹಂತವಾಗಿದ್ದು, ಈ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನೇರವಾಗಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದು. ಶಾಲಾ ಹಂತದಿಂದ ಸ್ವೀಕರಿಸಿದ ನಮೂದುಗಳನ್ನು ಪರಿಶೀಲಿಸಿ, ಉತ್ತಮವಾದ, ಅರ್ಹವಾದ ಸ್ಪರ್ಧಿಗಳನ್ನು ಆನ್‍ಲೈನ್ ಮೂಲಕ ಆಯ್ಕೆ ಮಾಡಿ (ಪ್ರತಿ ಸ್ಪರ್ಧೆಯಲ್ಲಿ ಪಡೆದ ಪ್ರಥಮ ಸ್ಥಾನ ಒಬ್ಬ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಯನ್ನು) ನ. 20 ರೊಳಗೆ ರಾಜ್ಯ ಕಚೇರಿಗೆ ಕಳುಹಿಸಲಾಗುವುದು. ಹೀಗಾಗಿ ಆಸಕ್ತ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಲೋತ್ಸವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು, ಈ ನಿಟ್ಟಿನಲ್ಲಿ ಆಯಾ ಶಾಲೆಗಳು ಕ್ರಮ ವಹಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!