ದಾವಣಗೆರೆಯಲ್ಲಿ ಚುನಾವಣಾ ಕತ್ತಲ ರಾತ್ರಿ.! ಗಲ್ಲಿಗಲ್ಲಿಯಲ್ಲಿ ಗರಿಗರಿ ನೋಟು.!
ದಾವಣಗೆರೆ: ಮೇ 10 ರಂದು ಸಾರ್ವತ್ರಿಕ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕತ್ತಲ ರಾತ್ರಿಯಲ್ಲಿ ರಾಜಾ ರೋಷವಾಗಿ ಹಣ ಹಂಚಿಕೆ ಮಾಡುತ್ತಿದ್ದಾರೆ.
ನಗರದ ನಿಟ್ಟುವಳ್ಳಿ, ಕೆಟಿಜೆ ನಗರ, ಮೌನೇಶ್ವರ ಬಡಾವಣೆ, ಸೇರಿದಂತೆ ರೆಡ್ ಜೋನ್, ಯಲ್ಲೋ ಜೋನ್, ಗ್ರೀನ್ ಜೋನ್ ಎಂದು ವಿಂಗಡಿಸಿಹಣ ಹಂಚುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೆಲವೆಡೆ ಬೆಂಡೊಲೆ, ಬೆಳ್ಳಿ ಲೇಪನವಿರುವ ಗಣೇಶ, ನೀಡಿದ್ರೆ, ಇನ್ನೂ ಕೆಲವೆಡೆ ಭಗವದ್ಗೀತೆ ಪುಸ್ತಕ ನೀಡಿ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರಂತೆ,
ಚುನಾವಣಾ ಆಯೋಗ ಎಷ್ಟೆಲ್ಲಾ ಬಿಗಿ ಕ್ರಮ ಕೈಗೊಂಡಿದೆ, ಆದ್ರೆ ಓಟಿಗಾಗಿ ಕಾಸು ನೀಡೊದು ಮಾತ್ರ ನಿಂತಿಲ್ಲ.