Elephant: “ಗಜಮುಖ” ನಿಗೆ ‘ಗಜರಾಜ’ ನಿಂದ ಮಾಲಾರ್ಪಣೆ
ದಾವಣಗೆರೆ: ದಾವಣಗೆರೆಯ ವಿನೋಬನಗರದ 2ನೇ ಮೇನ್, 3ನೇ ಕ್ರಾಸ್ ನಲ್ಲಿ ಓಂ ಸಾಯಿ ಫ್ರೆಂಡ್ಸ್ ಗ್ರೂಪ್‌ನಿಂದ ವಿನಾಯಕನನ್ನು ಪ್ರತಿಷ್ಠಾ ಪಿಸಲಾಗಿದ್ದು. ಗಜಮುಖನಿಗೆ ಗಜರಾಜ ತನ್ನ ಭಕ್ತಿ ಮೆರೆದಿದ್ದಾರೆ. ಗಣೇಶನಿಗೆ ಅಕ್ಷತೆ ಹಾಕಿ, ಮಾಲಾರ್ಪಣೆ ಮಾಡಿದ್ದು ಕಂಡುಬಂತು. ಕೋವಿಡ್ ಹಿನ್ನಲೆಯಲ್ಲಿ ಕೇವಲ ಒಂದು ದಿನ ಪೂಜೆ ಸಲ್ಲಿಸಲಾಗಿದ್ದು ಸಂಜೆ ಗಣೇಶನನ್ನು ವಿಸರ್ಜಿಸಲಾಯಿತು. ಗ್ರೂಪ್‌ನ ಸತೀಶ, ಪ್ರಜ್ವಲ್, ಮಲ್ಲಿಕಾರ್ಜುನ, ಜಯಂತ್, ಪವನ್, ಪುಟ್ಟು, ವಿನಯ್ ಇತರರು ಇದ್ದರು.