ದಾವಣಗೆರೆ ಮೂಲದ ಸ್ಯಾಂಡಲ್ ವುಡ್ ನಟಿ ಕೃಷಿಕನ ಜೊತೆ ಎಂಗೆಜ್ಮೆಂಟ್.!?
ದಾವಣಗೆರೆ: ಮೂಲತಃ ದಾವಣಗೆರೆಯವರಾಗಿ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡುತ್ತಿರುವ ಅದಿತಿ ಪ್ರಭುದೇವ ಈಗ ಯಾರಿಗೂ ತಿಳಿಯದಂತೆ ಗುಟ್ಟಾಗಿ ಎಂಗೆಜ್ಮೆಂಟ್ ಮಾಡಿಕೊಂಡಿದ್ದಾರೆ.
ಹೌದು ಲಕ್ಷಾಂತರ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಹಿರೋಯಿನ್ ಆಗಿರುವ ಈ ಮುದ್ದುಮುಖದ ಚೆಲುವೆ ಲಕ್ಷಾಂತರ ಹುಡುಗರ ಮನಗೆದ್ದಿದ್ದಳು. ಈಗ ಸುಳಿವೇ ನೀಡದೇ ಸೀಕ್ರೇಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಅದಿತಿ, ಕೊನೆಗೂ ತಾನಂದುಕೊಂಡಂತೆ ಕೃಷಿ ಕ್ಷೇತ್ರದ ಹುಡುಗನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ!
ಅದಿತಿಗೂ ಈ ಮೊದಲಿನಿಂದಲೂ ಕೃಷಿ ಬಗ್ಗೆ ಹೆಚ್ಚು ಒಲವಿತ್ತು. ಅದಕ್ಕೆ ತಕ್ಕಂತೆ ಶೂಟಿಂಗ್ ಇರದ ಹೊತ್ತಲ್ಲಿ ಕೃಷಿ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಅದಿತಿ ಪ್ರಭುದೇವ, ಈಗ ಕಾಫಿ ಎಸ್ಟೇಟ್ ಮಾಲೀಕನನ್ನೆ ಕೈಹಿಡಿಯಲಿದ್ದಾರೆ.
ಚಿಕ್ಕಮಗಳೂರು ಮೂಲದ ಯಶಸ್ ಎಂಬುವವರನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅದಿತಿ, ಈಗ ಕುಟುಂಬದವರ ಒಪ್ಪಿಗೆ ಪಡೆದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.