ಗ್ರಾಹಕ ಉತ್ಪನ್ನಗಳ ಮೇಲೆ ಐ.ಎಸ್.ಐ ಮಾರ್ಕ ಇರುವುದನ್ನು ಖಚಿತ ಪಡಿಸಿಕೊಳ್ಳಿ: ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ:.ಎಸ್.ಐ ಗುರುತಿನ ವಸ್ತುಗಳ ಗುಣಮಟ್ಟದ ಬಗ್ಗೆ ಎಲ್ಲರು ಮಾಹಿತಿ ಪಡೆಯುವುದು ಅವಶ್ಯಕವೆಂದು  ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಿದ್ದ ಬ್ಯೂರೋ ಆಫ್ ಇಂಡಿಯನ್(IBS) ಹುಬ್ಬಳ್ಳಿ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಗುಣಮಟ್ಟದ ಸರ್ಕಾರದ  ಯೋಜನೆಗಳು, ಕಾಮಗಾರಿಗಳು, ಗ್ರಾಹಕ/ಆರೋಗ್ಯ ಸೇವೆಯ ವಸ್ತುಗಳು, ಉಪಕರಣಗಳು ಹಾಗೂ ಇನ್ನಿತರ ಉತ್ಪನ್ನಗಳನ್ನುಕೊಳ್ಳುವಾಗ  ಐ.ಎಸ್.ಐ ಮಾರ್ಕ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು, ಈ ರೀತಿಯಾದ ಕಾರ್ಯಕ್ರಮವನ್ನು ಜಿಲ್ಲಾಡಳಿತದಲ್ಲಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಹುಬ್ಬಳಿ ಶಾಖೆಯ ಸಹಾಯಕ ನಿರ್ದೇಶಕರಾದ ಸೌವಿಕ್‌ಸಿಖಂದರ್ ಮಾತಾನಾಡಿ  ಯಾವುದೇ ವಸ್ತುವನ್ನು ಖರೀದಿ ಮಾಡುವಾಗ, ಸಂಗ್ರಹಿಸುವಾಗ ಅದರ ಗುಣಮಟ್ಟವನ್ನು ನೋಡಿ ನಂತರ ಖರೀದಿಸಬೇಕು. ಭಾರತದಲ್ಲಿ ಒಟ್ಟು 12 ಸಾವಿರ ವಸ್ತುಗಳ ಗುಣಮಟ್ಟವನ್ನು ಅಭಿವೃದ್ದಿ ಪಡಿಸಲಾಗಿದೆ .ಯಾವುದೇ ಒಂದು ವಸ್ತುವಿನ ಉತ್ಪಾದನೆ ಮತ್ತು ಸರಬರಾಜು ಬಳಕೆಯ ಹಂತದಲ್ಲಿ ನುರಿತ ತಙ್ಞರಿಂದ ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಲಾಗುತ್ತದೆ. ಭಾರತ ಸರ್ಕಾರವು ೨೦೧೬ರಲ್ಲಿ ಬಿಐಎಸ್ ಕಾಯ್ದೆಯನ್ನು ಜಾರಿಗೆ ತಂದಿರುತ್ತದೆ.
ಆಹಾರ ಇಲಾಖೆಯ ಉಪ ನಿರ್ದೇಶಕರಾದ ನಜ್ಮಾ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕಾವಗಿ ನುಡಿಗಳಾನ್ನಾಡಿದರು.
ಕಾರ್ಯಕ್ರಮದಲ್ಲಿ ನಾಗರೀಕ ಮತ್ತು ಆಹಾರ ಸರಬರಾಜು ನಿಗಮದ ಉಪನಿರ್ದೇಶಕರಾದ ನಜ್ಮಾ ಹಾಗೂ ಸಹ ನಿರ್ದೇಶಕರಾದ ಶಿವಾಜಿ. ಜಿಲ್ಲಾ ಮಟ್ಟದ ಅಧೀಕಾರಿಗಳು ಹಾಗೂ ಆಹಾರ ಇಲಾಖೆ ಸಿಬ್ಬಂದಿಗಳು ನ್ಯಾಯ ಬೆಲೆ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!