ಎಸ್ಸೆಸ್ಸೆಲ್ಸಿ ರಿಸಲ್ಟ್ : ಚಿತ್ರದುರ್ಗ ಪ್ರಥಮ ಸ್ಥಾನ ದಾವಣಗೆರೆಗೆ 14ನೇ ಸ್ಥಾನ
ಬೆಂಗಳೂರು: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶೇ 83.89 ಫಲಿತಾಂಶ ಬಂದಿದೆ.
ಪರೀಕ್ಷೆ ಬರೆದ 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಪಡೆದಿದ್ದಾರೆ.
ಈ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 83.89 ವಿದ್ಯಾರ್ಥಿನಿಯರು, ಶೇ 80.08 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ಪ್ರಥಮ ಸ್ಥಾನ, ಮಂಡ್ಯ 2ನೇ, ಹಾಸನ 3ನೇ ಸ್ಥಾನ ಗಳಿಸಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಚಿತ್ರದುರ್ಗಕ್ಕೆ ಶೇ. 96.80, ಮಂಡ್ಯ ಜಿಲ್ಲೆಗೆ ಶೇ. 96.74ರಷ್ಟು ಫಲಿತಾಂಶ ಬಂದಿದೆ. ಕೊನೆಯ ಸ್ಥಾನ ಗಳಿಸಿರುವ ಯಾದಗಿರಿ ಜಿಲ್ಲೆಯಲ್ಲಿ ಶೇ.75.49ರಷ್ಟು ಫಲಿತಾಂಶ ಬಂದಿದೆ.
ಈ ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ:
* ಭೂಮಿಕಾ ಪೈ: ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು
* ಭೀಮನಗೌಡ ಪಾಟೀಲ್: ಆಕ್ಸ್‌ಫರ್ಡ್ ಹೈಸ್ಕೂಲ್, ಮುದ್ದೇಬಿಹಾಳ, ವಿಜಯಪುರ
* ಅನುಪಮಾ ಶ್ರೀಶೈಲ್ ಹಿರೆಹೊಳಿ: ಶ್ರೀ ಕುಮಾರೇಶ್ವರ ಶಾಲೆ, ಸವದತ್ತಿ, ಬೆಳಗಾವಿ
* ಯಶಸ್ ಗೌಡ: ಬಿಜಿಎಸ್ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ