ಚಿನ್ನದ ಕಾರ್ ಟ್ಯಾಕ್ಸಿ ನೋಡಿದ್ದೀರಾ? : ಬುಕ್ ಮಾಡೋಕೆ 7 ಲಕ್ಷ ರೂ.!

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ವಿದೇಶಿ ಕಾರುಗಳಿಗೆ ಭರವಿಲ್ಲ. ಅದರಲ್ಲೂ ರೋಲ್ಸ್ ರಾಯ್ಸ್ ಕಾರುಗಳ ಓಡಾಟವನ್ನು ಜನರು ನೋಡಿಯೇ ಇರುತ್ತಾರೆ. ಆದರೀಗ ಹೊಸ ಮಾದರಿಯ ರೋಲ್ಸ್ ರಾಯ್ಸ್ ‘ಫ್ಯಾಂಟಮ್’ ಕಾರು ಬೆಂಗಳೂರಿನ ರಸ್ತೆಗಳಲ್ಲಿ ಆಕರ್ಷಣೆ ಆಗುತ್ತಿದೆ. ಏಕೆಂದರೆ ಈ ಕಾರು ಗೋಲ್ಡ್ ಪ್ಲೇಟೆಡ್ ಆಗಿದೆ. ಜನರು ಈ ಕಾರ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಈ ಕಾರಿನ ಮಾಲೀಕ ಬಾಬಿ ಚೆಮ್ಮನೂರ್. ಆತ ಓರ್ವ ಉದ್ಯಮಿ. ಆಭರಣ ವ್ಯಾಪಾರದಲ್ಲಿ ಅವರು ತೊಡಗಿದ್ದಾರೆ. ಜನರ ಎಕ್ಸೆಟ್ ಮೆಂಟ್ ಕಂಡು ಅವರೂ ಉತ್ಸುಕರಾಗಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿ ಅವರ ಹೊಸ ಆಭರಣ ಮಳಿಗೆ ಉದ್ಘಾಟನೆಗೊಳ್ಳುತ್ತಿದೆ. ಮಳಿಗೆಯಲ್ಲಿ ಈ ಚಿನ್ನದ ಕಾರು ಆಕರ್ಷಣೆಯಾಗಲಿದೆ. ಕಾರಿನಿಂದಾಗಿ ಜನರು ತಮ್ಮ ಮಳಿಗೆಯತ್ತ ಬರುವಂತಾಗಲಿ ಎನ್ನುವ ಆಸೆ ಅವರದು. ಈ ಚಿನ್ನದ ಕಾರನ್ನು ಜನರು ಕೂಡಾ ಅನುಭವಿಸಬೇಕು ಎನ್ನುವ ಬಾಬಿ ಅವರು ಈ ಕಾರಣಕ್ಕೇ ತಮ್ಮ ಚಿನ್ನದ ಕಾರನ್ನು ಟ್ಯಾಕ್ಸಿಯಾಗಿ ಮಾರ್ಪಾಡು ಮಾಡಿದ್ದಾರೆ. ಜನರು 7 ಲಕ್ಷ ರೂ. ಕೊಟ್ಟು ಈ ಕಾರನ್ನು ಬುಕ್ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!