Bsy Award: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೆ “ವೀರಭದ್ರೇಶ್ವರ ಪ್ರಶಸ್ತಿ”

IMG-20210912-WA0015

ಬೆಳಗಾವಿ: ವೀರಶೈವ ಲಿಂಗಾಯತ ಸಂಘಟನೆಯು ಇದೆ 14ನೇ ಮಂಗಳವಾರ ಸಂಜೆ 6 ಕ್ಕೆ ಬೆಂಗಳೂರುನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿರುವ ವೀರಭದ್ರೇಶ್ವರ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕರಾದ ಬಿಎಸ್ ಯಡಿಯೂರಪ್ಪ ಅವರಿಗೆ ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇದು ಮೊದಲ ಬಾರಿಗೆ ಪ್ರಶಸ್ತಿಯಾಗಿದ್ದು ಶ್ರೀಮಠದಿಂದ ನೀಡಲಾಗುತ್ತಿದೆ ರೂ 50 ಸಾವಿರದ ಮೌಲ್ಯದ ವಸ್ತುವನ್ನು ಕಾಣಿಕೆಯಾಗಿ ನೀಡಲಾಗುವುದು.

ಮುಂದುವರೆದು ಮಾತನಾಡಿದ ಅವರು ಯಡಿಯೂರಪ್ಪನವರ ಮನೆದೇವರು ವೀರಭದ್ರೇಶ್ವರ ಸ್ವಾಮಿ ಆಗಿರುವುದರಿಂದ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದಾರೆ.ಮಠಮಾನ್ಯಗಳ ವಿಚಾರದಲ್ಲಿ ಸಹಾಯಕ್ಕೆ ಮುಂಚೂಣಿಯಲ್ಲಿ ಇರುವುದರಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!