Exclusive: ಸಚಿವ ಮುರುಗೇಶ್ ನಿರಾಣಿಗೆ ಕಂಟಕ : ಜನಪ್ರತಿನಿಧಿಗಳ ನ್ಯಾಯಾಲಯದಿಂದ ಪೊಲೀಸರಿಗೆ ಸೂಚನೆ

ಬೆಂಗಳೂರು: ಹಿಂದೂ ದೇವತೆಗಳ ವಿರುದ್ಧ ವಾಟ್ಸಪ್‌ನಲ್ಲಿ ಆಕ್ಷೇಪಾರ್ಹ ಸಂದೇಶ ರವಾನಿಸಿದ್ದ ಆರೋಪದಡಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಖಾಸಗಿ ದೂರನ್ನು ಆಧರಿಸಿ ಈ ಕುರಿತು ಕೋಡಿಗೆಹಳ್ಳಿ ಠಾಣೆಯ ಪೊಲೀಸರಿಗೆ ನಿರ್ದೇಶನ ನೀಡಿರುವ ನ್ಯಾಯಲಯವು ಸೆ.13 ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಬಿಜೆಪಿ ಎಂದ ಕೂಡಲೇ ತಕ್ಷಣಕ್ಕೆ ನೆನಪಾಗುವುದೇ ಹಿಂದುತ್ವ. ದೇವತೆಗಳು, ಮಠಮಾನ್ಯಗಳನ್ನು ಹೆಚ್ಚು ಶ್ರದ್ಧಾ ಭಕ್ತಿಯಿಂದ ಪೂಜಿಸುವ, ಗೌರವಿಸುವ ಪಕ್ಷವೆಂದೇ ಬಿಂಬಿತವಾಗಿರುವ ಬಿಜೆಪಿಗೆ ಅದೇ ಪಕ್ಷದಲ್ಲಿನ ಸಿಎಂ ಅಭ್ಯರ್ಥಿಯ ರೇಸ್ ನಲ್ಲಿ ಕಾಣಿಸಿಕೊಂಡಿದ್ದ ಮುರುಗೇಶ್ ನಿರಾಣಿ ಹಿಂದೂ ದೇವತೆಗಳ ಬಗ್ಗೆಯೇ ಆಕ್ಷೇಪಾರ್ಹ ಸಂದೇಶ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತನಿಖೆಯ ನಂತರವಷ್ಟೇ ಆರೋಪದ ಸತ್ಯಾಸತ್ಯಾತೆ ಹೊರಬರಲಿದೆ.