ಲೋಕಲ್ ಸುದ್ದಿ

ದಾವಣಗೆರೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆ

ದಾವಣಗೆರೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆ

ದಾವಣಗೆರೆ :  ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪನವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ದಾವಣಗೆರೆ ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಜನ್ಮದಿನದ ಶುಭಾಶಯವನ್ನು ಕೋರಿದರು.

ಇದೇ ವೇಳೆ ಮಾತನಾಡಿದ ಈಶ್ವರಪ್ಪನವರು, “ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲಿಯೂ ಆಗಲಿದೆ ಕಾಯ್ದು ನೋಡಿ, ಇನ್ನು ಮೂರು ತಿಂಗಳು ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ. ಅಜೀತ್ ಪವಾರ್ ರಂತಹ ನಾಯಕನೊಬ್ಬ ಕಾಂಗ್ರೆಸ್ ನಲ್ಲಿಯೇ ಹುಟ್ಟುತ್ತಾನೆ, ಇದರಿಂದ ಕಾಂಗ್ರೆಸ್ ಶಾಸಕರಿಗೆ ತುಂಬಾ ನೋವಾಗುತ್ತದೆ. ಈಗಾಗಲೆ ಗ್ಯಾರಂಟಿಗಳ ಜಾರಿಯಲ್ಲಿ ವಿಳಂಬವಾಗಿದೆ. ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದೇವೆ ಎಂದು ಶಾಸಕರಿಗೆ ಬೇಸರವಿದೆ. ಇದೇ ಕಾರಣದಿಂದ ಕಾಂಗ್ರೆಸ್ ಸರ್ಕಾರ ಬಿದ್ಕು ಹೋಗಲಿದೆ”. ಎಂದು ಈಶ್ವರಪ್ಪ ನವರು ಗುಡುಗುತ್ತಾ ಮತ್ತೆ ಆಪರೇಷನ್ ಕಮಲದ ಮುನ್ಸೂಚನೆ ನೀಡಿದರು.

‘ನಾವು ಈ ಹಿಂದೆ ಮಾಡಿದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಹೇಳಿದ್ದಾರೆ, ಹಿಂದೂ  ಸಮಾಜದ ಎಲ್ಲ ಸ್ವಾಮೀಜಿಗಳು‌ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಈ ಕಾರಣಕ್ಕೆ ಸದ್ಯಕ್ಕೆ ಕಾಯ್ದೆಗಳ ವಾಪಸ್ಸಾತಿ ಇಲ್ಲ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ’.

“ಇನ್ನು ಮುಂದೆ ಇಂತಹ  ನಿರ್ಧಾರಕ್ಕೆ ಬಂದರೆ ಹೋರಾಟ ಮಾಡುತ್ತೇವೆ, ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ತನಕ ವಿಧಾನ ಸಭೆಯ ಒಳಗೆ ಹಾಗೂ ಹೋರಾಟ ನಿರಂತರ ಮಾಡುತ್ತೇವೆ” ಎಂದು ಕೆ.ಎಸ್. ಈಶ್ವರಪ್ಪನವರು ಸರ್ಕಾರದ ವಿರುದ್ಧ ಗುಡುಗಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ. ಬಸವರಾಜ ಬೊಮ್ಮೊಯಿ,  ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಬಿವೈ ರಾಘವೇಂದ್ರ ಇತರರು ಉಪಸ್ಥತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top