ಟ್ರಾಫಿಕ್ ಫೈನ್ ರಿಯಾಯಿತಿ ಅವಧಿ ವಿಸ್ತರಣೆ.! ನಾಳೆ ಆದೇಶ ಸಾಧ್ಯತೆ.!

ಟ್ರಾಫಿಕ್ ಫೈನ್
ಬೆಂಗಳೂರು : ಫೆಬ್ರವರಿ 3ರಂದು ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೇಲೆ ಅರ್ಧದಷ್ಟು ರಿಯಾಯಿತಿ ಆದೇಶವನ್ನು ಫೆಬ್ರವರಿ 11ಕ್ಕೆ ಸಿಮೀತವಾಗಿ ಆದೇಶಿಸಿತ್ತು.
ಈ ಆದೇಶದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು ತಮ್ಮ ಬಾಕಿ ದಂಡ ಶುಲ್ಕವನ್ನು ಕಟ್ಟಿ ನಿರಾಳಲಾಗಿದ್ದರು. ಇನ್ನೂ ಕೆಲವರು ದಂಡ ಕಟ್ಟಿ ರಿಯಾಯಿತಿ ಸೌಲಭ್ಯ ಪಡೆಯುವ ತವಕದಲ್ಲಿದ್ದರು.
ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಭರಪೂರ ಸ್ಪಂದನೆ ದೊರೆತಿದೆ. ಸರ್ಕಾರದ ಭೊಕ್ಕಸಕ್ಕೆ ಕೋಟಿಗಟ್ಟಲೇ ಹಣ ಹರಿದು ಬಂದಿತ್ತು.
ಆದರೆ ಫೆ.11ರವರೆಗೆ ಮಾತ್ರ ರಿಯಾಯಿತಿ ಎಂದು ನಿಗಧಿಪಡಿಸಿದ್ದುದು ಕೆಲವರಿಗೆ ಕಷ್ಟವಾಗಿತ್ತು. ಇದೀಗ ಮತ್ತೆ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50 ರಿಯಾಯಿತಿ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿ ಆದೇಶ ಹೊರಡಿಸಲಿದೆ.
ಈ ಸಂಬಂಧ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50 ರಿಯಾಯಿತಿ ಅವಧಿಯನ್ನು ರಾಜ್ಯ ಸರ್ಕಾರ ಫೆಬ್ರವರಿ 14 ರಿಂದ ಪೆಬ್ರವರಿ 28ರವರೆಗೆ ವಿಸ್ತರಣೆ ಮಾಡಲಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಅವರು ಖಚಿತಪಡಿಸಿದ್ದಾರೆ.