ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಹೇಳಿದ್ದಾರೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬಸವನಹಳ್ಳಿ ಠಾಣೆಯ ಪೊಲೀಸರು ದಾವಣಗೆರೆ ಮೂಲದ ಹರೀಶ್ ಎಂಬವರನ್ನು ಬಂಧಿಸಿದ್ದಾರೆ. ಸಿ.ಟಿ.ರವಿ ಬಗ್ಗೆ ನಕಲಿ ಪೋಸ್ಟ್ ವೈರಲ್ ಹಿನ್ನೆಲೆ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದು ಹರೀಶ್ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಬಂಧಿತ ಆರೋಪಿ ಕ್ಷಮೆ ಯಾಚಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದರು. ಠಾಣೆಯ ಬಳಿ ಘೋಷಣೆ ಕೂಗಿದರು.
ಲಿಂಗಾಯತ ವಿರೋಧಿ ಹೇಳಿಕೆಯನ್ನು @CTRavi_BJP ನೀಡಿದ್ದಾರೆಂಬ ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕರಣದಲ್ಲಿ @INCKarnataka ನಾಯಕನ ಬಂಧನವಾಗಿದೆ. ಈ ವೇಳೆ ಬಸವನಹಳ್ಳಿ ಪೊಲೀಸ್ ಠಾಣೆ ಬಳಿ ಹೈಡ್ರಾಮ ನಡೆದಿದೆ. ಆರೋಪಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ#KarnatakaElections2023 pic.twitter.com/9ntPySRIgZ
— ಅಲ್ವಿನ್ ಮೆಂಡೋನ್ಸ (Alvin Mendonca) (@alvinviews) April 15, 2023
ಈ ನಡುವೆ, ಸಾರ್ವಜನಿಕರೆದುರು ತಪ್ಪೊಪ್ಪಿಕೊಂಡ ಕಾಂಗ್ರೆಸ್ ಕಾರ್ಯಕರ್ತ ಹರೀಶ್, ತನ್ನ ಕೃತ್ಯದ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಆ ಕ್ಷಮೆಯಾಚನೆಯ ವೀಡಿಯೋ ವೈರಲ್ ಆಗಿದೆ.
