ದಾವಣಗೆರೆ: ಇದೇ ಫೆ.20ರಂದು ನಡೆಯಲಿರುವ ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ತೆರಳುವ ಪಾದಯಾತ್ರೆಗೆ ಫೆ.18ರಂದು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿಯ ಕಾನೂನು ಸಲಹೆಗಾರ ಬಸವರಾಜಪ್ಪ ಕೊರಡೂರು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವಣದಲ್ಲಿ ರಾತ್ರಿ 8 ಗಂಟೆಗೆ ನಡೆಯುವ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವನ್ನು ನಂದಿತಾವರೆಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ವಹಿಸಲಿದ್ದಾರೆ.
ಎನ್. ಬಕ್ಕೇಶ್ ಅಧ್ಯಕ್ಷತೆ ವಹಿಸಲಿದ್ದು, ಡಾ.ವಿನಯಾಸ್ವಾಮಿ ಪಿ.ಎಂ., ದೇವರಮನೆ ಶಿವಕುಮಾರ್, ಬಿ.ಜಿ. ಅಜಯಕುಮಾರ್, ವಿ.ಮಹಾಂತೇಶ್, ಕೆ.ಎ.ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಬಿ. ಶಿವಕುಮಾರ್, ಕೆ.ಎಂ. ಲೋಕೇಶ್ವರಯ್ಯ, ಹೆಚ್.ಚನ್ನಬಸಪ್ಪ, ಶಂಭುಲಿಂಗಪ್ಪ ಬಿ.ಹೆಚ್., ಗಿರೀಶ್ ಬಿ.ಆರ್., ಸಣ್ಣಬಸಪ್ಪ ಇತರರು ಉಪಸ್ಥಿತರಿದ್ದರು.
