ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದ ರೈತರ ಪ್ರತಿಭಟನೆ

ದಾವಣಗೆರೆ : ಅಕ್ರಮ ಸಕ್ರಮದಡಿ ರೈತರಿಗೆ ಟಿಸಿಗಳನ್ನು ವಿತರಿಸಬೇಕು . ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ೫ ಗಂಟೆಗಳ ಹಗಲು ವೇಳೆ ವಿದ್ಯುತ್ ಪೂರೈಕೆಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಹುಚ್ಚವ್ವಹಳ್ಳಿ ಮಂಜುನಾಥ್ ಬಣದಿಂದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ನಗರ ಜಯದೇವ ವೃತ್ತದಿಂದ ಹೊರಟ ಪ್ರತಿಭಟನೆ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಅಧೀಕ್ಷಕ ಇಂಜಿನಿಯರ್ ಕಚೇರಿ ತಲುಪಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಈ ವೇಳೆ ಮಾತನಾಡಿದ ಸಂಘದ ರಾಜಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ , ಈ ಹಿಂದೆ ಬರಗಾಲದ ಪರಿಸ್ಥಿತಿಯಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇರಲಿಲ್ಲ. ಇಂಥಹ ಸಂದರ್ಭದಲ್ಲಿ ವಿದ್ಯಾತ್ ಎಷ್ಷು ಗಂಟೆಗಳ ಕಾಲ ಕೊಡುತ್ತಾರೊ ಅಷ್ಷೇ ಸಾಕು ಎಂದು ರೈತರು ಸಮಾಧಾನಪಟ್ಟು ಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು , ಕೊಳವೆ ಬಾವಿಗಳಲ್ಲಿ ನೀರಿನ ಸಾಮಥ್ಯç ಹೆಚ್ಚಾಗಿದೆ. ಇದರೊಂದಿಗೆ ಅಡಿಕೆ ತೋಟಗಳು ಕೂಡ ಹೆಚ್ಚಾಗಿವೆ. ಇತರೆ ಬೆಳೆಗಾಗಿ ರೈತರು ಕೊಳವೆ ಬಾವಿಗಳನ್ನೆ ಹೆಚ್ಚಾಗಿ ಅವಲಂಭಿಸಿದ್ದಾರೆ. ಈ ಹಿನ್ನೆಯಲ್ಲಿ ರಾತ್ರಿ ಬದಲು ಹಗಲು ವೇಳೆಯಲ್ಲಿಯೇ ಕನಿಷ್ಠ ೫ ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ನೀತಿ ನಿಯಮಗಳು ಏನೇ ಇದ್ದರೂ ಅಕ್ರಮ ಸಕ್ರಮ ದಡಿ ಹಣ ತುಂಬಿರುವ ಎಲ್ಲ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ನೀಡಬೇಕು. ಸರ್ಕಾರದ ಮಟ್ಟದಲ್ಲಿ ವಿದ್ಯುತ್ ಪರಿವರ್ತಕಗಳ ಪೂರೈಕೆಗೆ ಲಾಭಿ ನಡೆಯುತ್ತಿದೆ. ಇದರಿಂದ ಪರಿವರ್ತಕಗಳ ಪೂರೈಕೆ ವಿಳಂಬವಾಗಿ ರೈತರು ತೊಂದರೆ ಅನುಭವಿಸು ವಂತಾಗಿದೆ. ಅಕ್ರಮ ಸಕ್ರಮಕ್ಕೆ ಹಣ ತುಂಬಿ ಮೂರು ವರ್ಷವಾದರೂ ಟಿಸಿಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಪರವಾಗಿ ಸರ್ಕಾರದ ಮೇಲೆ ಒತ್ತಡ ತಂದು ತ್ವರಿತವಾಗಿ ಟಿಸಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧೀಕ್ಷಕ ಇಂಜಿನಿಯರ್ ಸುರೇಶ್ ಪಾಟೀಲ್ ರೈತರ ಬೇಡಿಕೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಎಇಇ ಜಗದೀಶ್ ಉಪಸ್ಥಿತರಿದ್ದರು.