ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ರೈತರಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ – ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ

IMG-20211025-WA0070

ದಾವಣಗೆರೆ: ತಾಲ್ಲೂಕಿನ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಸೋಮವಾರ ತಹಶೀಲ್ದಾರ್ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಗರ್‌ಹುಕುಂ ಮುಂಜೂರಾತಿ ಸಮಿತಿಯು ಪ್ರತಿ ಸೋಮವಾರ ಸಭೆಯನ್ನು ಮಾಡಿ, ತಾಲ್ಲೂಕಿನ ಬಗರಹುಕಂ ಅರ್ಜಿಗಳನ್ನು ಪರಿಶೀಲಿಸಿ ಸಭೆಗೆ ಮಂಡಿಸಲು ಪ್ರತ್ಯೇಕ ಆರ್.ಐ. ಸರ್ವೆಯರ್, ಗ್ರಾಮ ಲೆಕ್ಕಾಧಿಕಾರಿಗಳ ಸಮಿತಿ ಮಾಡಬೇಕು. ಕೆಲವು ಗ್ರಾಮಗಳಲ್ಲಿ ಅರಣ್ಯ ಭೂಮಿ ಹಾಗೂ ಕರ್ನಾಟಕ ಸರ್ಕಾರ ಎಂದು ಪಹಣಿಯಲ್ಲಿ ಬರುತ್ತಿದ್ದು, ಅದರಿಂದ ಜಂಟಿ ಸರ್ವೆ ಮಾಡಿ ಗಡಿಗಳನ್ನು ಗುರುತಿಸಬೇಕು. ಅರಣ್ಯ ಭೂಮಿ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ಪತ್ರ ನೀಡಬೇಕು, ಬಗರ್ ಹುಕುಂ ಸಮಿತಿಯಲ್ಲಿ ಅರ್ಜಿಯನ್ನು ಮಂಡಿಸುವುದಕ್ಕಿಂತ ಮೊದಲು ಅರ್ಜಿದಾರನಿಗೆ ಮಾಹಿತಿ ನೀಡಬೇಕು ಎಂಬುದು ಸಏರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿ ೯೦ ರ ದಶಕದಿಂದ ಇಲ್ಲಿಯವರೆಗೆ ಹಲವಾರು ರಾಜ್ಯ ಸರ್ಕಾರಗಳು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಅಶ್ವಾಸನೆ ನೀಡುತ್ತಾ ಬಂದಿದ್ದು, ಕೇವಲ ಸಾವಿರಾರು ಎಕರೆ ಜಮೀನಿನನ್ನು ಮಾತ್ರ ಮಂಜೂರು ಮಾಡಿವೆ. ಇದರಿಂದ ಭೂರಹಿತ ಹಾಗೂ ಕೃಷಿ ಕಾರ್ಮಿಕರಿಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ಪಾಮೇನಹಳ್ಳಿ ಗೌಡ್ರು ಶೇಖರಪ್ಪ, ಹೊನ್ನೂರು ಸಿದ್ದವೀರಪ್ಪ, ಗುಮ್ಮನೂರು ಬಸವರಾಜ್, ಕುಕ್ಕುವಾಡ ಉಮೇಶ್, ಕೈದಾಳೆ ವಸಂತಕುಮಾರ್, ರವಿಕುಮಾರ್, ಚಿಕ್ಕತೊಗಲೇರಿ ಕೆಂಚಪ್ಪ, ಕಾಡಜ್ಜಿ ಪ್ರಕಾಶ್, ಆಲೂರಹಟ್ಟಿ ಪುಟ್ಟನಾಯ್ಕ್, ಕುರ್ಕಿ ಹನುಮಂತಪ್ಪ, ನೀರ್ಥಡಿ ತಿಪ್ಪೇಶ್, ಚಿಕ್ಕಬೂದಾಳ್ ಭಗತ್‌ಸಿಂಗ್, ಹುಚ್ಚವ್ವನಹಳ್ಳಿ ಪ್ರಕಾಶ್, ನಾಗರಾಜ ತುಂಬಿಗೆರೆ, ಕಿತ್ತೂರು ಹನುಮಂತಪ್ಪ, ದೇವರಾಜ್ ತಳವಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!