ಫೆ. 5 ರಂದು ” ಹವಳದ ದಿಂಡು ” ಕೃತಿ ಲೋಕಾರ್ಪಣೆ

"ಹವಳದ ದಿಂಡು " ಕೃತಿ ಲೋಕಾರ್ಪಣೆ
ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್, ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : 5 / 2 / 2023ರ ಭಾನುವಾರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ವಿದ್ಯಾ ನಗರದ ಕುವೆಂಪು ಕನ್ನಡ ಭವನದಲ್ಲಿ ಕವಿ, ಚಿಂತಕ, ಮಹಾಂತೇಶ್ ಬಿ ನಿಟ್ಟೂರ್ ಅವರ ” ಹವಳದ ದಿಂಡು ” ಕೃತಿ ಲೋಕಾರ್ಪಣೆ ಹಾಗೂ ಕಾವ್ಯ ಗಾಯನ ಕಾರ್ಯಕ್ರಮ ನಡೆಯಲಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ ಶಿವರಾಜು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಚಿಂತಕ , ಕವಿ ಡಾ. ಆನಂದ ಋಗ್ವೇದಿ ವಹಿಸಲಿದ್ದಾರೆ. ದಾವಣಗೆರೆ ಜಿಲ್ಲಾ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ಎಚ್.ಎಸ್ ಮಂಜುನಾಥ್ ಕುರ್ಕಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ಡಾ. ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕರಾದ ಸಾಹಿತಿ ಮುದೇನೂರು ನಿಂಗಪ್ಪ ಅವರು ಕೃತಿ ಅವಲೋಕನ ಮಾಡಲಿದ್ದಾರೆ.
ರಾಣೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಹೊನ್ನಪ್ಪ ಹೊನ್ನಪ್ಪನವರ ಆಶಯ ನುಡಿಯಾಡಲಿದ್ದಾರೆ .
ಮುಖ್ಯ ಅತಿಥಿಗಳಾಗಿ ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷರಾದ ಕೆ ಏಕಾಂತಪ್ಪ, ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ ಪಾಲಾಕ್ಷ, ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸಿ.ಬಿ ರವಿ ಹಾಗೂ ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಾಜಶೇಖರ ಗುಂಡಗಟ್ಟಿ ಅವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಿರೇಕೋಗಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ಸಾವಿತ್ರಮ್ಮ, ಹಳೆ ಕುಂದುವಾಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಮಂಜುಳಾ ಕೆ ವಿ, ತ್ಯಾವಣಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ ವಿ ಎಸ್ ಹಾಗೂ ದಾವಣಗೆರೆ ದೂಡಾ ಸದಸ್ಯರಾದ ಆರ್ ಲಕ್ಷ್ಮಣ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಸಂಗೀತ ರಾಘವೇಂದ್ರ ಹಾಗೂ ಇಪ್ಟಾ ಕಲಾವಿದ ಐರಣಿ ಚಂದ್ರು ಅವರು ಮಹಾಂತೇಶ್ ಬಿ ನಿಟ್ಟೂರರ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡಲಿದ್ದಾರೆ.
ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ನಂಟು, ಕಾವ್ಯಧಾರೆ, ಬೆಳಕಿನ ಸಮಾಧಿ, ಡೊಂಕು ಲೋಕದ ಕೊಂಕು ತಿಮ್ಮ, ಒಡಲು ಬೆಂಕಿಯ ಗದ್ದೆ, ಹಾದಿಯ ಹಂಗು ಎಂಬಿತ್ಯಾದಿ ವಿಶಿಷ್ಠ ಕೃತಿಗಳ ಕೊಡುಗೆ ನೀಡಿರುವ ಮಹಾಂತೇಶ್ ನಿಟ್ಟೂರು ಅವರ ಈ ಮಹತ್ವದ ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹಾಗೂ ಕನ್ನಡದ ಅಭಿಮಾನಿಗಳು ಆಗಮಿಸಿ ಶುಭ ಹಾರೈಸಬೇಕಾಗಿ ಬಜ್ಜಿ ಹನುಮಂತಪ್ಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಿ ಎಚ್ ಆಂಜನೇಯ ಅವರು ಕೋರಿದ್ದಾರೆ.